ಜೀವನ ಅನ್ನೋದು ಯಾವ ಸಿನಿಮಾ ಕಥೆಗೂ ಕಡಿಮೆ ಏನಿಲ್ಲ. ಕೆಲವೊಮ್ಮೆ ಕೆಲವು ಕಡೆ ನಡೆಯೋ ಘಟನೆಗಳು ಸಿನಿಮಾಗಳಲ್ಲಿ ಕೂಡಾ ನೋಡೋಕೆ ಸಿಗೋಲ್ಲ. ಇವು ಮೌಲ್ಯಗಳನ್ನು ಎತ್ತಿ ಹಿಡಿಯೋ ಹಾಗೂ ಇವತ್ತಿಗೂ ಅದಕ್ಕಾಗಿ ತುಡಿಯೋ ಜನ ಇದ್ದಾರೆ ಅನ್ನೋದನ್ನು ಮನವರಿಕೆ ಮಾಡಿಕೊಡುತ್ತೆ. ಅದಕ್ಕೆ ಉದಾಹರಣೆಯಾಗಿರೋ ಒಂದು ಘಟನೆಯ ಬಗ್ಗೆ ಕೇರಳದ ಬರಹಗಾರ್ತಿಯಾದ ಸಂಧ್ಯಾ ಪಲ್ಲವಿಯವರು ಬರೆದಿರುವ ಬರಹ ಈಗ ವೈರಲ್ ಆಗಿದೆ. ಸಂಧ್ಯಾ ಅವರು ತಾವು ಭಾಗಿಯಾದ ಒಂದು ಮದುವೆ ಕಾರ್ಯಕ್ರಮದ ಬಗ್ಗೆ ಭಾವುಕರಾಗಿ ಬರೆದಿರುವ ಬರಹ ಇದಾಗಿದ್ದು, ಇದರಲ್ಲಿ ಒಬ್ಬ ಆದರ್ಶ ತಂದೆಯನ್ನು ನಾವು ನೋಡಬಹುದಾಗಿದೆ.

ಕೊಟ್ಟಯಂ ನ ತಿರುನಕ್ಕರ್ ನಿವಾಸಿಯಾದ ಶಾಜಿ ಅವರ ಮಗ ಆರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಒಬ್ಬ ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿದ್ದ. ಆಗ ಹುಡುಗಿಯ ತಂದೆ ತಾಯಿ ಅದರ ಬಗ್ಗೆ ಪೋಲಿಸರಿಗೆ ದೂರು ಕೊಟ್ಟ ಮೇಲೆ, ಪೋಲಿಸರು ಆ ಜೋಡಿಯನ್ನು ಪತ್ತೆ ಹಚ್ಚಿ ಕರೆತಂದರು. ಆದರೆ ಇಬ್ಬರೂ ಮೈನರ್ ಆದ ಕಾರಣ ಮದುವೆಗೆ ಅವಕಾಶ ಇರಲಿಲ್ಲ. ಅಲ್ಲದೆ ಹುಡುಗಿ ಮನೆಯವರು ತಮ್ಮ ಮರ್ಯಾದೆ ಕಳೆದ ಮಗಳು ಬೇಡ ಅಂದಾಗ, ಶಾಜಿ ಅವರು ತಾವೇ ಆ ಹುಡುಗಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋದರಲ್ಲದೆ,ಆಕೆಯ ಓದನ್ನು ಮುಂದುವರೆಸಲು ನೆರವಾದರು. ಹಾಸ್ಟೆಲ್ ಗೆ ಸೇರಿಸಿದ ಮಗ ಮತ್ತೆ ಅಲ್ಲಿ ಬೇರೆ ಹುಡುಗಿಯನ್ನು ಪ್ರೀತಿಸಿದ ವಿಚಾರ ತಿಳಿದ ಕೂಡಲೇ ಅವನನ್ನು ಗಲ್ಫ್‌ ಗೆ ಕರೆದುಕೊಂಡು ಹೋದರು.

ಉನ್ನತ ವ್ಯಾಸಾಂಗ ಮುಗಿಸಿ ಮರಳಿದ ಮಗ ತಾನು ಪ್ರೀತಿಸಿದ ಹುಡುಗಿಯ ಬದಲಾಗಿ ಬೇರೆ ಹುಡುಗಿಯನ್ನು ಮದುವೆಯಾದ. ಇದರಿಂದ ಬೇಸರಗೊಂಡ ಶಾಜಿ ದಂಪತಿಗಳು ಮಗನಿಂದ ಮೋಸ ಹೋದ, ತಮ್ಮ ಮನೆಯಲ್ಲಿದ್ದ ಹುಡುಗಿಯನ್ನ ತಮ್ಮ ಮಗಳೆಂದು ಸ್ವೀಕರಿಸಿದರು. ಶಾಜಿ ಅವರು ತಮ್ಮ ಆಸ್ತಿಯನ್ನು ಆ ಹುಡುಗಿ ಹೆಸರಿಗೆ ಮಾಡಿ, ಆಕೆಗೆ ಒಳ್ಳೆಯ ವರನನ್ನು ಹುಡುಕಿ ತಿರುನಕ್ಕರ್ ನ ಆಲಯದಲ್ಲಿ ಮದುವೆ ಮಾಡಿದ್ದಾರೆ. ಅಲ್ಲದೆ ಮಗನನ್ನು ತಮ್ಮ ಮನೆಯಿಂದ ಹೊರಹಾಕಿದ ಅವರು ಮಗನಿಂದ ಮೋಸ ಹೋದ ಆ ಹೆಣ್ಣು ಮಗಳಿಗೆ ತಾವೇ ತಂದೆಯಾಗಿ ಜವಾಬ್ದಾರಿ ಮೆರೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here