ಕರ್ನಾಟಕ ರಾಜ್ಯದ ಮಾತ್ರೆಗಳಲ್ಲಿ ಇನ್ನುಮುಂದೆ ಕನ್ನಡದ ಆ/ಇ ಸುವರ್ಣಾಕ್ಷರಗಳು ರಾರಾಜಿಸಲಿವೆ. ಈ ಮೂಲಕ ಕನ್ನಡದ ಕಂಪು ಆರೋಗ್ಯದಲ್ಲೂ ಕಂಗೊಳಿಸಲಿದೆ ಏನಪ್ಪಾ ಇದು ಅಂತ ಕಂಫ್ಯೂಸ್ ಆಗ್ಬೇಡಿ ವಿಷಯ ಏನು ಗೊತ್ತಾ ನೀವು ಸರ್ಕಾರಿ ಆಸ್ಪತ್ರೆಯಲ್ಲಿ ನೀಡುವ ಮಾತ್ರೆಗಳಲ್ಲಿ ಆ / ಇ ಎಂದು ಬರೆದಿರುವುದು ಗಮನಿಸಿರಬಹುದು ಆದರೆ ಹೆಚಚಿನವರಿಗೆ ಅದರ ಅರ್ಥ ತಿಳಿದಿಲ್ಲ. ಜಿಲ್ಲಾ ಆಸ್ಪತ್ರೆ , ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಕೇಂದ್ರಗಳಲ್ಲಿ ನೀಡುವ ಮಾತ್ರೆಗಳಲ್ಲಿ ಆ-ಇ ಎಂದು ಮುದ್ರಿಸಲು ಸರ್ಕಾರಸೂಚಿಸಿದೆ. ಆ-ಆರೋಗ್ಯ ಇ-ಇಲಾಖೆ ಎಂದರ್ಥ . ಮಾತ್ರೆಗಳಲ್ಲೂ ಅವ್ಯವಹಾರ ಕಂಡು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಮಾತ್ರೆಗಳನ್ನು ತಡೆಗಟ್ಟಲು ಮತ್ತು ಖಾಸಗಿಯಾಗಿ ಮಾರಾಟ ಮಾಡುವುದು ಕಂಡು ಬಂದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.ಆರೋಗ್ಯ ಇಲಾಖೆಯು ಅಕ್ರಮ ತಡೆಗಟ್ಟಲು ಹೊಸ ಸಕ್ರಮವಾದ ಯೋಜನೆ ಕೈಗೊಂಡಿರುವುದರಿಂದ ಜನಸಾಮನ್ಯರಿಗೆ ತುಂಬಾ ಸಹಕಾರಿಯಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here