ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಎಸ್.ಟಿ.ಎಫ್.ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಮೂಡಿಬಂದಿರುವ ಆದ್ಯಾ ಚಿತ್ರ ಈಗಾಗಲೇ ಎಲ್ಲ ವರ್ಗದ ವೀಕ್ಷಕರನ್ನು ಆಕರ್ಷಿಸಿದೆ.ವಿಶೇಷವಾಗಿ ವೀಕ್ಷಕರು ಕುಟುಂಬ ಸಮೇತರಾಗಿ ಚಿತ್ರವನ್ನು ವೀಕ್ಷಸುತ್ತಿರುವುದೇ ಚಿತ್ರದ ಗೆಲುವಿಗೆ ಸಾಕ್ಷಿಯಾಗಿದೆ.ಯಾವತ್ತೂ ಫ್ಯಾಮಿಲಿ ಡ್ರಾಮಾ ಎಂಟರ್ಟೇನರ್ ಚಿತ್ರಗಳನ್ನು ನೋಡಲು ಬರುವ ಫ್ಯಾಮಿಲಿ ಆಡಿಯನ್ಸ್ , ಒಂದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿರುವುದೇ ಆದ್ಯಾ ಚಿತ್ರದ ಆಕರ್ಷಣ ಶಕ್ತಿಯನ್ನು ತಿಳಿಸುತ್ತಿದೆ.

ಯುವ ಸಾಮ್ರಾಟ್ ಚಿರು ಸರ್ಜಾ ತಮ್ಮ ಗಂಭೀರ ನಟನೆಯಿಂದ ಪ್ರೇಕ್ಷಕರನ್ನು ಪ್ರಾರಂಭದಿಂದ ಕೊನೆಯ ತನಕ ಕಾಡುತ್ತಾರಲ್ಲದೆ, ಒನ್ ಮ್ಯಾನ್ ಶೋ ಮಾದರಿಯ ನಟನೆಯನ್ನು ಚಿತ್ರದುದ್ದಕ್ಕೂ ತೋರ್ಪಡಿಸಿದ್ದಾರೆ.ಅಲ್ಲದೇ ಸಂಗೀತಾ ಭಟ್ , ಶ್ರುತಿ ಹರಿಹರನ್, ಪ್ರಮೋದ್ ಶೆಟ್ಟಿ , ರವಿಶಂಕರ್ ಗೌಡ ಎಲ್ಲರೂ ತಮ್ಮ ಪಾತ್ರದ ಮಹತ್ವದ ಛಾಪನ್ನು ಪರದೆಯ ಮೇಲೆ ಹಾಗೂ ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸುತ್ತಾರೆ.

ಈ ಎಲ್ಲಾ ಬಗೆಯ ಪರಿಪೂರ್ಣತೆಯ ಶ್ರೇಯ ಈ ಆದ್ಯಾ ಎಂಬ ಹಡಗಿನ ಕಪ್ತಾನರಾದ ನಿರ್ದೇಶಕ ಕೆ.ಎಮ್. ಚೈತನ್ಯ ರವರಿಗೆ ಸಲ್ಲಬೇಕು.
ಪ್ರತಿಯೊಬ್ಬ ಕಲಾವಿದರ ಉತ್ತಮತೆಯನ್ನು ಸೋಸಿ ತೆಗೆದು ಪರದೆಯ ಮೇಲೆ ಉತ್ತಮ ಚಿತ್ರದ ಉಡುಗೊರೆಯನ್ನು ಕನ್ನಡಿಗರಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ನೀಡಿದ್ದಾರೆ.ಚಿತ್ರಕ್ಕೆ ನಮ್ಮ ರೇಟಿಂಗ್ 4 ಸ್ಟಾರ್ .ತಪ್ಪದೇ ಆದ್ಯಾ ಚಿತ್ರವನ್ನು ವೀಕ್ಷಿಸಿ . ಇಂತಹ ಒಳ್ಳೆಯ ಕನ್ನಡ ಚಿತ್ರವನ್ನು ಬಹುಕಾಲ ಉಳಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here