ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ದೇಶ ವಾಸಿಗಳ ಸಹಕಾರವನ್ನು ಬಯಸಿದೆ ಭಾರತ ಸರ್ಕಾರ. ಇದೇ ವಿಷಯವನ್ನು ಇಂದು ಪ್ರಧಾ‌ನಿ ನರೇಂದ್ರ ಮೋದಿಯವರು ಕೂಡಾ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಪ್ರಧಾನಿಯವರು ಇಂದು ಎರಡನೇ ಅವಧಿಗೆ ದೇಶದಲ್ಲಿ ಲಾಕ್ ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಆರೋಗ್ಯ ಸೇತು ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ, ಅದನ್ನು ಬಳಸುವಂತೆ ಮಾತ್ರವಲ್ಲದೇ ಈ ಅಪ್ಲಿಕೇಷನ್ ಇತರರು ಕೂಡಾ ಬಳಸಲು ಪ್ರೇರಣೆ ನೀಡಿ ಎಂಬುದಾಗಿ ಮನವಿಯೊಂದನ್ನು ಮಾಡಿದ್ದಾರೆ.

ಆರೋಗ್ಯ ಸೇತು ಆ್ಯಪ್ ಜನರ ಮುಂದೆ ಬಂದಿರುವ ಹೊಸ ಆ್ಯಪ್ ಆಗಿದ್ದು ಈ ಮೂಲಕ ಸೋಂಕಿತ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಿ, ಆರೊಗ್ಯವಂತರಿಗೆ ರೋಗ ಹರಡದಂತೆ ತಡೆಗಟ್ಟುವ ಆಶಯದೊಂದಿಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಆಪ್ ಅನ್ನು ಬಳಸುವುದರಿಂದ ಇದರ ಮೂಲಕ ಕೊವಿಡ್19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮಲ್ಲಿ ಟ್ರ್ಯಾಕ್ ಮಾಡಲು ಸಾಧ್ಯವಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ NIC eGov Mobile AppsTools ಈ ಆರೋಗ್ಯ ಸೇತು ಆ್ಯಪನ್ನು ಅಭಿವೃದ್ಧಿಪಡಿಸಿದೆ.

ಇದನ್ನು ಡೌನ್‌ಲೋಡ್ ಮಾಡಿಕೊಂಡ ಮೇಲೆ ಇದರಲ್ಲಿ ಲಭ್ಯವಿರುವ ಹನ್ನೊಂದು ಭಾಷೆಗಳಲ್ಲಿ ನಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬೇಕಿದೆ. ಈ ಅಪ್ಲಿಕೇಷನ್ ಜನರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತದೆ. ಈ ಅಪ್ಲಿಕೇಷನ್ ಹೊಸ ಪ್ರಕರಣಗಳನ್ನು ಕಂಡು ಹಿಡಿಯುತ್ತದೆಯೇ ಹೊರತು ಇರುವ ರೋಗಿಗಳ ಮೇಲೆ ಕಣ್ಗಾಗಾವಲು ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here