ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಎಂದೆಲ್ಲಾ ಹೆಸರುಗಳಿಸಿ, ಸದಾ ಕ್ರಿಯಾಶೀಲ ಮತ್ತು ಚಟುವಟಿಕೆಯಿಂದ ಇರುವ ನಟ ಶಿವರಾಜ್ ಕುಮಾರ್ ಅವರ ಸಿನಿಮಾ ಅಂದರೆ ಅಭಿಮಾನಿಗಳಿಗೆ ಕ್ರೇಜ್ , ಸಿನಿ ರಸಿಕರಿಗೆ ಹಬ್ಬ ಹಾಗೂ ಸಿನಿ ಅಭಿಮಾನಿಗಳಿಗೆ ದೃಶ್ಯ ಕಾವ್ಯವನ್ನು ಕಣ್ತುಂಬಿಕೊಳ್ಳುವ ಹಬ್ಬ ಎನ್ನುವಂತೆ ಇರುತ್ತದೆ. ಈಗ ಅಂತಹ ಎಲ್ಲಾ ನಿರೀಕ್ಷೆಗಳನ್ನು ತಣಿಸಲು ಬೆಳ್ಳಿ ತೆರೆಯ ಮೇಲೆ‌‌ ಮಿಂಚಲು, ಮಿಂಚಿ ಮನ ತಣಿಸಲು ಸಿದ್ಧವಾಗಿದೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ, ನಿರ್ದೇಶಕ ಪಿ.ವಾಸು ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಆಯುಷ್ಮಾನ್ ಭವ.

ಆಯುಷ್ಮಾನ್ ಭವ ಇದೇ ನವೆಂಬರ್ 15 ರಂದು ಬಿಡುಗಡೆಯಾಗಲಿದೆ. ಈ ದಿನಾಂಕದೊಂದಿಗೆ ಮತ್ತೊಂದು ವಿಶೇಷ ಕೂಡಾ ಇದೆ. ಅದೇನೆಂದರೆ 23 ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ದಾಖಲೆಯ ಹೊಸ ಇತಿಹಾಸವನ್ನು ರಚಿಸಿ, ಸಂಗೀತದೊಂದಿಗೆ ಒಂದು ಅಮರ ಪ್ರೇಮದ ದೃಶ್ಯಕಾವ್ಯವನ್ನು ಜನರ ಮುಂದಿಟ್ಟು, ಅಪಾರ ಮೆಚ್ಚುಗೆ ಹಾಗೂ ಭರ್ಜರಿ ಯಶಸ್ಸನ್ನು ಪಡೆದ ಶಿವಣ್ಣ ಅಭಿನಯದ ಕನ್ನಡ ಚಿತ್ರ ರಂಗ ಎಂದೂ ಮರೆಯದ ಸಿನಿಮಾ ಜನುಮದ ಜೋಡಿ ಕೂಡಾ ನವೆಂಬರ್ 15, 1996 ರಲ್ಲಿ ಬಿಡುಗಡೆಯಾಗಿತ್ತು ಎಂಬುದು ವಿಶೇಷ.

 

ಜನುಮದ ಜೋಡಿಯಲ್ಲಿ ಕೃಷ್ಣ ಹೆಸರಿನಿಂದ ಜನಪ್ರಿಯರಾದ ಶಿವಣ್ಣ ಆಯುಷ್ಮಾನ್ ಭವದಲ್ಲೂ ಕೂಡಾ ಕೃಷ್ಣ ಹೆಸರಿನಿಂದಲೇ ನಮ್ಮೆದುರಿಗೆ ಬರಲಿದ್ದಾರೆ. ಆಯುಷ್ಮಾನ್ ಭವ ಹಾರರ್ ನೊಂದಿಗೆ ರಹಸ್ಯ ಹೊಂದಿರುವ ಸಿನಿಮಾ ಆಗಿದ್ದು, ದ್ವಾರಕೀಶ್ ಅವರ ಹೋಂ ಬ್ಯಾನರ್ ಅಡಿಯಲ್ಲಿ ಶಿವಣ್ಣ ನಟಿಸಿರುವ ಮೊದಲ ಸಿನಿಮಾ ಇದಾಗಿದೆ. ಇನ್ನು ಸಿನಿಮಾದಲ್ಲಿ ಹಿರಿಯ ತಾರೆಯರಾದ ಅನಂತ್ ನಾಗ್, ಸುಹಾಸಿನಿ ಅವರು ಇದ್ದು, ರಚಿತಾ ರಾಮ್, ಸಾಧು ಕೋಕಿಲ, ಚಿಕ್ಕಣ್ಣ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here