ಅಭಿಮಾನಿಗಳಲ್ಲಿ ದೇವರನ್ನು ಕಂಡಾಗ

ಅದು ರಾಜ್ ಅವರ ಎರಡನೇ ಚಿತ್ರ ಸೋದರಿ ಬಿಡುಗಡೆಯಾದ ಸಂದರ್ಭ. ಆಗ ತಾನೇ ರಾಜ್ ಅವರು ಬೇಡರ ಕಣ್ಣಪ್ಪ ದಲ್ಲಿ ನಟಿಸಿ ಪ್ರಸಿದ್ದರಾಗಿದ್ದರು. ಆದರೂ ಅವರ ಎರಡನೇ ಚಿತ್ರಕ್ಕೆ ಪತ್ರಿಕೆಯ ವಿಮರ್ಶಕರಿಂದ ವ್ಯಾಪಕ ಟೀಕೆ ವ್ಯಕ್ತವಾಯಿತು. ದೊಡ್ಡ ಮೂಗಿನ ಈ ವ್ಯಕ್ತಿ ಏನು ತಾನೇ ಮಾಡಿಯಾನು ಎಂದು ಎಲ್ಲರೂ ಕುಹಕವಾಡುತ್ತಿರಲು, ರಾಜ್ ಪಾರ್ವತಿಯವರನ್ನು ಕರೆದು ಹೀಗನ್ನುತ್ತಾರೆ. ‘ನೋಡು ನಾವೊಮ್ಮೆ ಥೀಯೇಟರ್ ಗೆ ಹೋಗಿ ಚಿತ್ರ ನೋಡಿ ಬರೋಣ. ನಿಜವಾಗಿಯೂ ನಾನು ಅಷ್ಟೊಂದು ಕೆಟ್ಟದಾಗಿ ಕಾಣುತ್ತೇನೆ ಅನಿಸಿದರೆ ನಾನು ತಿರುಗಿ ನಾಟಕ ಲೋಕಕ್ಕೆ ತೆರಳುತ್ತೇನೆ’ ಎನ್ನುತ್ತಾರೆ.

 

ಚಿತ್ರ ನೋಡುವಾಗ ರಾಜ್ ಅವರಿಗೆ ಅನ್ನಿಸುತ್ತದೆ ಹೌದು ಪತ್ರಿಕೆಗಳಲ್ಲಿ ಬಂದಂತೆ ನನ್ನ ವೇಷ ಭೂಷಣ ಹಾವ ಭಾವ ಯಾವುದು ಚೆನ್ನಾಗಿಲ್ಲ ಎಂದೆನಿಸಿ ಇನ್ನೇನು ಹೊರಡಬೇಕು ಅನ್ನಿಸುವಷ್ಟರಲ್ಲಿ ಅಭಿಮಾನಿಗಳು ರಾಜ್ ನೋಡಿದವರೇ ಅವರನ್ನು ಎತ್ತಿಕೊಂಡು ಸಂಭ್ರಮಿಸುತ್ತಾರೆ. ಇವರು ನಮ್ಮ ದೇವರು ಅಣ್ಣಾವ್ರು ಎಂದು ಎಲ್ಲೆಲ್ಲು ಕೇಳಲು ರಾಜ್ ಅವರು ಹೀಗನ್ನುತ್ತಾರೆ ‘ನಿಜವಾಗಿಯೂ ನಾನಲ್ಲ ದೇವರು ನನ್ನಂತವರಿಗೂ ನಿಮ್ಮ ಹೃದಯದಲ್ಲಿ ಜಾಗ ಕೊಟ್ಟಂತಹ ನೀವುಗಳು ದೇವರುಗಳು.. ಅಭಿಮಾನಿ ದೇವರುಗಳು’ ಎನ್ನುತ್ತಾರೆ ರಾಜ್. ಅಂದಿನಿಂದ ತಮ್ಮ ಕೊನೆ ಉಸಿರಿರುವವರೆಗೂ ರಾಜ್ ಅವರು ಅಭಿಮಾನಿಗಳನ್ನು ದೇವರೆಂದೇ ಕರೆದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here