ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾದ ಮಿಲ್ಕಿ ಬ್ಯೂಟಿ ತಮನ್ನಾ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರನೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಈ ವಿಷಯವಾಗಿ ಈ ಬಾಹುಬಲಿ ಸಿನಿಮಾ ಖ್ಯಾತಿಯ ನಟಿ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದು, ತನ್ನ ಮದುವೆಯ ಬಗ್ಗೆ ಆಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ನಂತರ ಈ ಮಿಲ್ಕಿ ಬ್ಯೂಟಿ ತಮನ್ನಾ ಅವರು ಕೂಡಾ ಪಾಕಿಸ್ತಾನದ ಆಟಗಾರನನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಡಿ ಅದು ಸಾಕಷ್ಟು ಸದ್ದು ಮಾಡಿದ ಹಿನ್ನೆಲೆಯಲ್ಲಿ ನಟಿಯು ಈ ವಿಷಯಕ್ಕೆ ಸ್ಪಷ್ಟನೆಯನ್ನು ನೀಡುವ ಮೂಲಕ ಎಲ್ಲಾ ಅನುಮಾನಗಳಿಗೆ ಉತ್ತರ ನೀಡಿದ್ದಾರೆ.

ತಮನ್ನಾ ವಿವಾಹವಾಗಲಿದ್ದಾರೆ ಎಂದು ಹೇಳಿದ್ದ ಆ ಆಟಗಾರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್. ಅವರಿಗೆ ಈಗಾಗಲೇ ವಿವಾಹವಾಗಿರುವಾಗ ತಮನ್ನಾ ಜೊತೆ ವಿವಾಹವೇ? ಎಂಬ ಅನುಮಾನ ಹುಟ್ಟಲು ಕಾರಣವಾಗಿದ್ದು ವೈರಲ್ ಆದ ಒಂದು ಫೋಟೋ. ಫೋಟೋದಲ್ಲಿ ತಮನ್ನಾ ಮತ್ತು ರಜಾಕ್ ಅವರು ಪಕ್ಕಪಕ್ಕದಲ್ಲಿ ನಿಂತಿದ್ದಾರೆ. ಇದರಲ್ಲಿ ರಜಾಕ್ ಅವರು ಕೆಲ ಆಭರಣಗಳು ಹಿಡಿದುಕೊಂಡಿದ್ದಾರೆ. ಪಕ್ಕದಲ್ಲೇ ಬಿಳಿ ಬಣ್ಣದ ಚೂಡಿದಾರ್ ತೊಟ್ಟು ನಿಂತಿರುವ ತಮನ್ನಾ ಅವರು ಆ ಆಭರಣಗಳನ್ನು ಗಮನಿಸುತ್ತಿದ್ದಾರೆ. ಇದೊಂದು ಹಳೆಯ ಫೋಟೋ.

ಆದರೆ ಕಿಡಿಗೇಡಿಗಳು ಈ ಫೋಟೋವನ್ನು ವೈರಲ್ ಮಾಡಿ, ತಮನ್ನಾ ಅಬ್ದುಲ್ ರಜಾಕ್ ಅವರನ್ನು ಮದುವೆ ಆಗುತ್ತಾರೆ ಎಂದು ವದಂತಿ ಹರಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತಮನ್ನಾ ಹೌದು ಅವರನ್ನು ಭೇಟಿಯಾಗಿದ್ದು ನಿಜ, ಅದು ಒಂದು ಆಭರಣ ಮಳಿಗೆಯ ಉದ್ಘಾಟನೆಯಲ್ಲಿ. ಇದು ಹಳೆಯ ಪೋಟೋ, ಅದನ್ನೇ ಬಳಸಿ ಸುಳ್ಳು ಸುದ್ದಿ ಹರಡಲಾಗಿದೆ. ಅಲ್ಲದೇ ನನ್ನ ಮದುವೆಯ ವಿಷಯ ನಾನೇ ಹೇಳುತ್ತೇನೆ, ಗಾಳಿ ಸುದ್ದಿ ನಂಬಬೇಡಿ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here