ಭಾರತೀಯ ವಾಯುಸೇನೆಯ ಓರ್ವ ಪೈಲಟ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಪ ರಾಯಭಾರಿಗೆ ವಿದೇಶಾಂಗ ಸಚಿವಾಲಯದಿಂದ ಸಮನ್ಸ್ ನೀಡಲಾಗಿದ್ದು ವಶಕ್ಕೆ ಪಡೆದಿರುವ ಪೈಲೆಟ್ ಬಗ್ಗೆ ಮಾಹಿತಿ ನೀಡುವಂತೆ ಆದೇಶ ನೀಡಿದೆ. ಅತ್ತ ಕೆಲ ಅಧಿಕೃತ ಪಾಕಿಸ್ತಾನದ ಪತ್ರಕರ್ತರು ಸಹ ಭಾರತೀಯ ಪೈಲೆಟ್ ಅಭಿನಂದನ್ ಅವರನ್ನು ವಶಕ್ಕೆ ಪಡೆದಿರುವ ವೀಡಿಯೋ ಮತ್ತು ಫೋಟೋ ಗಳನ್ನು ಬಿಡುಗಡೆ ಮಾಡಿದ್ದವು. ನಂತರ ಭಾರತೀಯ ವಿದೇಶಾಂಗ ಸಚಿವಾಲಯ ಸಹ ಇದರ ಬಗ್ಗೆ ಮಧ್ಯಾಹ್ನ ಮಾಹಿತಿ‌ ನೀಡಿತ್ತು.ಭಾರತೀಯ ವಾಯು ಪಡೆಯಿಂದ ಪಾಕಿಸ್ತಾನದ ವಿಮಾನ ಪತನ ಮಾಡಲಾಗಿದೆ.

ಇದರ ಜೊತೆ ಇಂದು ಬೆಳಗ್ಗೆ ಪತನವಾಗಿದ್ದ ಮಿಗ್​-21 ವಿಮಾನದ ಪೈಲೆಟ್​ ನಾಪತ್ತೆಯಾಗಿದ್ದಾರೆ ಎಂದು ಭಾರತ ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್​ ಕುಮಾರ್​ ಹಾಗೂ ವಾಯು ಸೇನಾ ಉಪ ಉಪ ಮಾರ್ಷಲ್​ ಆರ್​ ಜಿಕೆ ಕಪೂರ್​ ಈ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆಜಮ್ಮು ಮತ್ತು ಕಾಶ್ಮೀರದ ಮಿಲಿಟರಿ ಸೇನೆಯ ಮೇಲೆ ದಾಳಿ ಮಾಡಲು ಯತ್ನಿಸಿದ್ದ ಪಾಕಿಸ್ತಾನದ ಯುದ್ಧವಿಮಾನವನ್ನು ಭಾರತೀಯ ವಾಯು ಸೇನೆ ಹೊಡೆದುರುಳಿಸಿದೆ ಎಂದಿದ್ದಾರೆ.

ಬೆಳಗ್ಗೆ ನಡೆದ ಮಿಗ್​-21 ವಿಮಾನ ಪತನ ಕುರಿತು ಮಾತನಾಡಿದ ಅವರು, ಪೈಲಟ್​ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲಟ್​ ನಮ್ಮ ಸಪರ್ದಿಯಲ್ಲಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ನಾವು ಖಚಿತಪಡಿಸಿಕೊಳ್ಳಬೇಕಿದೆ. ಪಾಕಿಸ್ತಾನ ಇಬ್ಬರು ಪೈಲೆಟ್​ ಅವರು ನಮ್ಮ ಬಳಿ ಇದೆ ಎಂದಿದ್ದಾರೆ ಎಂದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here