ಐಸಿಸಿ ವಿಶ್ವ ಕಪ್ ಕ್ರಿಕೆಟ್ ನ 12 ನೇ ಆವೃತ್ತಿಯಲ್ಲಿ ಬಹು ಜನರ ನಿರೀಕ್ಷಿತವಾದ ಇಂಡೋ-ಪಾಕ್ ಟೂರ್ನಿಯ ದಿನ ಹತ್ತಿರವಾಗುತ್ತಿರುವಾಗಲೇ ಪಾಕಿಸ್ತಾನದ ಟಿವಿ ಚಾನೆಲ್ ಒಂದು ಭಾರತವನ್ನು ಕೆಣಕುವ ಹಾಗೂ ಅಣಕಿಸುವ ಕುಕೃತ್ಯಕ್ಕೆ ಕೈಹಾಕಿದೆ. ವಿಶ್ವ ಕಪ್ ಕ್ರಿಕೆಟ್ ಅನ್ನು ಪಾಕಿಸ್ತಾನದಲ್ಲಿ ನೇರ ಪ್ರಸಾರ ಮಾಡುವ ಹಕ್ಕನ್ನು ಪಡೆದಿರುವ ಜಝ್ ಟಿವಿಯು ಇಂಡೋ ಪಾಕ್ ಕ್ರಿಕೆಟ್ ಬಗ್ಗೆ ಅಣಕವಾಡುವ ಒಂದು ಜಾಹೀರಾತನ್ನು ಪ್ರಸಾರ ಮಾಡಿದ್ದು, ಅದರಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಹೋಲುವಂತೆ ಮೀಸೆ ಬಿಟ್ಟ ವ್ಯಕ್ತಿಯಿದ್ದು, ಅವನು ಭಾರತ ಕ್ರಿಕೆಟ್ ಆಟಗಾರರು ಧರಿಸುವಂತ ಜೆರ್ಸಿ ಧರಿಸಿದ್ದಾನೆ.

ಈ ಜಾಹೀರಾತು 33 ಸೆಕೆಂಡ್ ಗಳಾಗಿದ್ದು, ಅದರಲ್ಲಿ ಭಾರತದ ವೀರ ಯೋಧ , ಅಭಿನಂದನ್ ಅವರು ಪಾಕಿಸ್ತಾನದ ಅತ್ಯಾಧುನಿಕ ಎಫ್ -16 ವಿಮಾನವನ್ನು ಹೊಡೆದುರುಳಿಸಿ, ನಂತರ ಪಾಕಿಸ್ತಾನದಲ್ಲಿ ಬಂಧಿತರಾಗಿದ್ದರು. ಆ ಸಂದರ್ಭದಲ್ಲಿ ಅವರ ಕೆಲವು ವಿಡಿಯೋಗಳು ಬಿಡುಗಡೆಯಾಗಿದ್ದವಜ. ಅದರಲ್ಲಿ ಒಂದು ವಿಡಿಯೋವನ್ನು ಆರಿಸಿಕೊಂಡಿರುವ ಟಿವಿ ಚಾನೆಲ್ ಅಭಿನಂದನ್ ಅವರು ಪಾಕ್ ಸೇನೆಯ ಉತ್ತರಿಸುತ್ತಿರುವ ವಿಡಿಯೋದ ಮಾದರಿಯಲ್ಲೇ ಈಗ ಈ ಅಣಕು ವಿಡಿಯೋವನ್ನು ಮಾಡಿದ್ದಾರೆ.

ವಿಡಿಯೋದಲ್ಲಿ ಅಭಿನಂದನ್ ಹೋಲಿಕೆಗಳ ವ್ಯಕ್ತಿಯನ್ನು ನೀವು ಟಾಸ್ ಗೆದ್ದರೆ ಏನ್ಮಾಡ್ತೀರಾ ಅಂದರೆ ಆ ವ್ಯಕ್ತಿ ನಾನಿದನ್ನು ಹೇಳುವಂತಿಲ್ಲ ಅಂದಿದ್ದಾನೆ. ಟೀಮ್ ಇಂಡಿಯಾದ ಪ್ಲೇಯಿಂಗ್ 11 ಹೇಗಿದೆ? ಎಂದು ಕೇಳಿದಾಗ ಆ ಅಣುಕು ವ್ಯಕ್ತಿ ಈ ಪ್ರಶ್ನೆಗೂ ನಾನು ಹೇಳುವಂತಿಲ್ಲ ಅಂದಿದ್ದಾನೆ. ಅದಾದ ಮೇಲೆ ಚಹಾ ಹೇಗಿದೆ ಎಂದರೆ ಅದು ಚೆನ್ನಾಗಿದೆ ಎಂದಿದ್ದಾನೆ. ಅಲ್ಲದೆ ಆ ವ್ಯಕ್ತಿ ಎದ್ದು ಹೋಗುವಾಗ ಕಪ್ ಹಿಡಿದು ಹೋಗುವಾಗ, ಅದೇಕೆ ಎಂದರೆ ಈ ಬಾರಿ ಕಪ್ ನಮ್ಮದೇ ಎಂದು ಭಾರತ ತಂಡವನ್ನು ಅಣಕವಾಡುವಂತೆ ಜಾಹೀರಾತು ಮಾಡಿ, ಪಾಕಿಸ್ತಾನದ ಚಾನೆಲ್ ಭಾರತವನ್ನು ಕೆಣಕಿದೆ. ಇದು ಪಾಕಿಸ್ತಾನದ ಸಂಕುಚಿತ ಬುದ್ಧಿಯನ್ನು ಎತ್ತಿ ತೋರಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here