ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಗ್ಗೆ ತಿಳಿಯದವರು ತೀರಾ ವಿರಳ. ಏಕೆಂದರೆ ಪುಲ್ವಾಮ ಅಟಾಕ್ ನಂತರ ಭಾರತವು ಪಾಕ್ ನ ಉಗ್ರ ನೆಲೆಯ ಮೇಲೆ ಏರ್ ಸ್ಟ್ರೈಕ್ ಮಾಡಿತ್ತು. ಆ ಘಟನೆಯ ನಂತರ ಪಾಕ್ ಕಡೆಯಿಂದ ಬರುತ್ತಿದ್ದ ಯುದ್ಧ ವಿಮಾನವನ್ನು ಬೆನ್ನಟ್ಟಿ ಹೊಡೆದುರುಳಿಸಿದ ಯೋಧ ಇವರು. ಈಗ ಇವರ ವಿಚಾರ ಮತ್ತೆ ಪ್ರವರ್ಧಮಾನಕ್ಕೆ ಬಂದಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಅವರು. ಅವರು ಸೋಮವಾರ ಲೋಕಸಭೆಯ ಅಧಿವೇಶನದಲ್ಲಿ ಮಾತನಾಡುತ್ತಾ, ಅಭಿನಂದನ್ ಅವರ ವಿಚಾರವನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಅಧಿವೇಶನದಲ್ಲಿ ಚರ್ಚೆಯ ಸಂದರ್ಭದಲ್ಲಿ ತಮ್ಮ ಮಾತುಗಳನ್ನು ಅಧಿವೇಶನದ ಮುಂದಿಡುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಅಧೀರ್ ಅವರು ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದ ಎಫ್-16 ವಿಮಾನವನ್ನು ಬೆನ್ನಟ್ಟಿ ಅದನ್ನು ಹೊಡೆದುರುಳಿಸಿದ್ದರು. ಆದ್ದರಿಂದ ಅವರಿಗೆ ಪ್ರಶಸ್ತಿಯನ್ನು ನೀಡಬೇಕು ಎಂದು ಹೇಳಿದ ಅವರು, ಅವರ ಈ ಕಾರ್ಯದಿಂದ ಭದ್ರತಾ ಪಡೆಗಳ ನೈತಿಕ ಸ್ಥೈರ್ಯ ಹಾಗೂ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.

ಇನ್ನು ಪಾಕಿಸ್ತಾನದ ಯುದ್ಧ ವಿಮಾನ ಬೆನ್ನಟ್ಟಿದ ಅಭಿನವ್ ಅವರು, ಪಾಕ್ ನ ವಿಮಾನವನ್ನು ಪತನಗೊಳಿಸಿದ್ದರು‌. ಅನಂತರ ಅವರು ಪಾಕ್ ನಲ್ಲಿ ಸೆರೆ ಸಿಕ್ಕಿದ್ದರು. ಮಾರ್ಚ್ ಒಂದರಂದು ಅವರನ್ನು ಬಿಡುಗಡೆ ಮಾಡಲಾಗಿತ್ತು. ಆಗ ಕಮಾಂಡರ್ ಅವರ ಮೀಸೆ ಒಂದು ಟ್ರೆಂಡ್ ಆಗಿದ್ದು ಮಾತ್ರವಲ್ಲದೆ, ಹಲವರು ಆ ರೀತಿ ಮೀಸೆ ಟ್ರಿಮ್ ಮಾಡಿಸಿದ್ದರು. ಇದನ್ನು ಪ್ರಸ್ತಾಪಿಸಿದ ಅಧೀರ್ ರಂಜನ್ ಅವರು ಅಭಿನಂದನ್ ಅವರ ಮೀಸೆಯನ್ನು ‘ರಾಷ್ಟ್ರೀಯ ಮೀಸೆ’ ಎಂದು ಘೋಷಣೆ ಮಾಡಿ ಎಂದು ಹೇಳಿದ್ದಾರೆ. ಅವರ ಮಾತಿನಲ್ಲಿ ತೀಕ್ಷ್ಣವಾದ ವಿಮರ್ಶೆ ಎಲ್ಲರಿಗೂ ಅರ್ಥವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here