ಭಾರತಕ್ಕೆ ಮರಳುತ್ತಿದ್ದಂತೇ ವಿಂಗ್ ಕಮ್ಯಾಂಡರ್ ವೀರ ಅಭಿನಂದನ್ ಅವರನ್ನು ಐ ಎ ಎಫ್ (  Indian air force ) ಅಧಿಕಾರಿಗಳು ಕುಟುಂಬದ ಜೊತೆ ಕೆಲ ಕಾಲ ಕಳೆಯಲು ಅವಕಾಶ ಕಲ್ಪಿಸಿತ್ತು. ಈ ಸಮಯದಲ್ಲಿ ಕುಟುಂಬದವರ ಜೊತೆ ಅಭಿನಂದನ್ ಮಾತನಾಡಿ ನಾನು ಆರೋಗ್ಯವಾಗಿದ್ದೇನೆ. ಹಾಗೂ ಆದಷ್ಟು ಬೇಹ ಕರ್ತವ್ಯಕ್ಕೆ ಮರಳುತ್ತೇನೆ ಎಂದು ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರು ಕುಟುಂಬದ ಸದಸ್ಯರ ಜೊತೆ ಹೇಳಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಿಂದ ವಾಘಾ ಗಡಿ ಮೂಲಕ ಭಾರತಕ್ಕೆ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಲಾಯಿತು ನಂತರ ಅಟರಿ ಗಡಿಯಲಿ ಭಾರತೀಯ ವಾಯು ಸೇನೆಯ ಅಧಿಕಾರಿಗಳು ಅಭಿನಂದನ್ ಅವರನ್ನು ಬರಮಾಡಿಕೊಂಡಿತು.

ಬಳಿಕ ಅಲ್ಲಿಯೇ ಬೆಳಿಗ್ಗೆಯಿಂದಲೇ ಅಭಿನಂದನ್ ಅವರಿಗಾಗಿ ಕಾದು ಕುಳಿತಿದ್ದ ತಂದೆ ವರ್ತಮಾನ್ , ತಾಯಿ ಹಾಗೂ ಅಭಿನಂದನ್ ಅವರ ಪತ್ನಿ ಮತ್ತು ಮಗನ ಜೊತೆ ಅಭಿನಂದನ್ ಕೆಲ ಹೊತ್ತು ಮಾತನಾಡಿದ್ದರು. ಈ ಸಮಯದಲ್ಲಿ ಅಭಿನಂದನ್ ನಾನು ಆರೋಗ್ಯವಾಗಿ ಇರುವುದಾಗಿ ತಿಳಿಸಿದ್ದು ಆದಷ್ಟು ಬೇಗನೇ ಸೇನೆಯ ಕಾರ್ಯಕ್ಕೆ ಮರಳುವುದಾಗಿ ತಂದೆ ಜೊತೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಇಂದು ಅಭಿನಂದನ್ ಅವರನ್ನು ದೆಹಲಿಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ನಂತರ ಅಭಿನಂದನ್ ಅವರು ಜೊತೆ ಸೇನೆಯ ಅಧಿಕಾರಗಳ ಜೊತೆ ವಿಚಾರಣೆಗೆ ಒಳಗಾಗಲಿದ್ದಾರೆ. ಕಳೆದ ಎತಡು ದಿನಗಳಿಂದ ಪಾಕಿಸ್ತಾನದಲ್ಲಿ ಇದ್ದ ಪ್ರತಿಯೊಂದು ಕ್ಷಣದ ಚಲನವಲನಗಳ ಬಗ್ಗೆ ಅಭಿನಂದನ್ ಅವರು ಭಾರತೀಯ ಅಧಿಕಾರಿಗಳಿಗೆ ಸಂಪೂರ್ಣವಾಗಿ ತಿಳಿಸಲಿದ್ದಾರೆ . ಇಂದು ಎರಡು ಮೂರು ಕಡೆ ಅಭಿನಂದನ್ ಅವರು ವಿಚಾರಣೆಗೆ ಒಳಪಡಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here