ಅಭಿಷೇಕ್ ಅಂಬರೀಶ್ ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅವರ ಪ್ರೇಮದ ಕುವರ ಅಂಬರೀಶ್ ಇರುವಾಗಲೇ ಚಿತ್ರರಂಗಕ್ಕೆ ಬರಬೇಕು ಎಂದು “ಅಮರ್ ” ಚಿತ್ರವನ್ನು ಒಪ್ಪಿ‌ ನಟನೆಗೆ ಇಳಿದಿದ್ದರು ಅಭಿಷೇಕ್ ಆದರೆ ದುರಾದೃಷ್ಟವಶಾತ್ ಅದು ತೆರೆಯ ಮೇಲೆ ಬರುವ ಮುನ್ನ ಅಂಬರೀಶ್ ಇಹಲೋಕ ತ್ಯಜಿಸಿ ಬಿಟ್ಟರು. ಆದರೂ ಅಂಬಿ ಅಭಿಮಾನಿಗಳು ಮಾತ್ರ ಅಮರ್ ಕೈಬಿಡಲಿಲ್ಲ. ಅಂಬಿಯನ್ನು ಅಭಿಷೇಕ್ ನಲ್ಲಿ ಕಾಣಿತ್ತಿರುವುದಾಗಿ ಚಿತ್ರವು ತಕ್ಕ ಮಟ್ಟಿಗೆ ಯಶಸ್ವಿಯಾಗುವಂತೆ ಮಾಡಿದರು. ಇತ್ತೀಚೆಗೆ ಅಭಿಷೇಕ್ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹರಡಿತ್ತು. ಇದನ್ನು ಅಲ್ಲಗಳೆದ ಸುಮಲತಾ ಅವರು ಅಭಿಷೇಕ್ ಅವರ ಅಪ್ಪನ ಹಾಗೆ ಮೊದಲು ಚಿತ್ರರಂಗದಲ್ಲೇ ಉಳಿಯುತ್ತಾರೆ ಎನ್ನುವ ಸೂಚನೆಯನ್ನು ನೀಡಿದ್ದರು.

ಅದಕ್ಕೆ ಪುಷ್ಟಿ ನೀಡುವ ಹಾಗೆ ಗಾಂಧಿನಗರದ ತುಂಬೆಲ್ಲಾ ಅಭಿಷೇಕ್ ಗೆ ಸಾಕಷ್ಟು ಸಿನಿಮಾಗಳು ಕೈಯಲ್ಲಿ ಇವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಮಾತಿಗೆ ಸಾಕ್ಷಿ ಅನ್ನುವಂತೆ ಅಭಿಷೇಕ್ ಅಂಬರೀಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಲುಕ್ ನಿಂದ ಮಿಂಚುವ ತಮ್ಮ ಪೋಟೋವನ್ನು ಹಾಕಿದ್ದಾರೆ. ಆ ಪೋಟೋದಲ್ಲಿ‌ ಅಭಿಷೇಕ್ ತುಸು ಗಡ್ಡದಾರಿ ಆಗಿ ಸ್ವಲ್ಪ‌ ತೂಕ ಇಳಿಸಿಕೊಂಡು ಕೊಂಚ ಸ್ಲಿಮ್ ಬಾಯ್ ಆಗಿ ಕಾಣಿಸುತ್ತಿದ್ದಾರೆ. ಇದು ಅವರ ಮುಂದಿನ ಚಿತ್ರದ ಹೊಸ ಲುಕ್ ಎನ್ನಲಾಗಿದೆ. ಇವರ ಈ ಲುಕ್ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.

ಅವರಷ್ಟೇ ಅಲ್ಲದೇ ಒಂದು ಕಾಲದ ಸ್ನೇಹಿತ ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ವಿರುದ್ಧ ನಿಂತು ಬದ್ಧ ವೈರಿ ಆಗಿದ್ದ ಮಾಜಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೂ ಸಹ ಅಭಿಷೇಕ್ ನ ಈ ಹೊಸ ಲುಕ್ ಗೆ ಫಿದಾ ಆಗಿ ಅವರು ಟ್ವಿಟ್ ಮಾಡಿದ್ದಾರೆ. ” looking sharp ಮುಂದೆ ಬರುವ ನಿಮ್ಮ ಚಿತ್ರದ ಲುಕ್ ನಿಮ್ಮ ಹೊಸ ಚಿತ್ರಕ್ಕೆ ಶುಭವಾಗಲಿ” ಎಂದು ಶುಭಹಾರೈಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here