ನಟ ಅಭಿಷೇಕ್ ಅಂಬರೀಶ್ ಅವರ ಚೊಚ್ಚಲ ಸಿನಿಮಾ ಅಮರ್ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಯ ನಂತರ ಅದರ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೀತಿಯ ಪ್ರತಿಕ್ರಿಯೆಗಳು ಬರುವುದು ಸಹಜ. ಈ ಕುರಿತಾಗಿ ಅಭಿಷೇಕ್ ಅವರು ಯಾವ ಸಿನಿಮಾ ಕೂಡಾ ಪರ್ಫೆಕ್ಟ್ ಅಲ್ಲ. ಕೆಲವರಿಗೆ ಸಿನಿಮಾ ಇಷ್ಟವಾಗಬಹುದು, ಇನ್ನೂ ಕೆಲವರಿಗೆ ಸಿನಿಮಾ ಇಷ್ಟವಾಗದೆಯು ಇರಬಹುದು ಎಂದಿದ್ದಾರೆ. ಅಮರ್ ಚಿತ್ರ ಬಿಡುಗಡೆಯ ನಂತರ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು‌. ಪತ್ರಿಕೆಗಳಲ್ಲಿ ಕೂಡಾ ಕೆಲವೆಡೆ ಚಿತ್ರದ ಬಗ್ಗೆ ಪಾಸಿಟಿವ್ ಟಾಕ್ ಇದ್ದರೆ ಮತ್ತೆ ಕೆಲವು ಪತ್ರಿಕೆಗಳಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯ ಬಂದಿದೆ.

ಈ ರೀತಿ ಮಿಶ್ರ ಪತ್ರಿಕೆಯೆಗೆ ಬಂದುದಕ್ಕೆ ಪ್ರತಿಕ್ರಿಯೆ ನೀಡುತ್ತಾ ಅಭಿಷೇಕ್ ಅವರು ತಾನು ನೆಗೆಟಿವ್ ರಿವ್ಯೂ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಹತ್ತು ಜನ ಹೊಗಳಿದರೆ ಅದು ನಮ್ಮ ಮಧ್ಯದಲ್ಲೇ ಇರುತ್ತದೆ. ಆದರೆ ಅದರ ಬದಲಾಗಿ ಬೈದರೆ ಅದನ್ನು ನೂರು ಜನರು ಕೇಳಿಸಿಕೊಳ್ಳುತ್ತಾರೆ. ಸಿನಿಮಾಗೆ ನನ್ನ ನಿರೀಕ್ಷಣೆಗೂ ಮೀರಿದ ಪ್ರತಿಕ್ರಿಯೆ ಬಂದಿದ್ದು, ನೂರ ಜನರಲ್ಲಿ ಐದು ಜನರು ಚೆನ್ನಾಗಿಲ್ಲ ಎಂದ ಮಾತ್ರಕ್ಕೆ ಉಳಿದವರನ್ನು ಮರೆಯಲಾಗುವುದಿಲ್ಲ ಎಂದವರು ಹೇಳಿದ್ದಾರೆ.

ಸಿನಿಮಾ ಏನು ಅನ್ನುವುದನ್ನು ಆ ಚಿತ್ರದ ಕಲೆಕ್ಷನ್ ಹೇಳುತ್ತದೆ. ಕಲೆಕ್ಷನ್ನೇ ಪ್ರೇಕ್ಷಕರ ಪ್ರತಿಕ್ರಿಯೆ ಎಂದಿರುವ ಅವರು ಸಿನಿಮಾದ ಕಲೆಕ್ಷನ್ ಬಗ್ಗೆ ನಿರ್ಮಾಪಕರೇ ಹೇಳಿರುವಾಗ ನಾನು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಹಳಷ್ಟು ಜನ ಮೆಸೆಜ್ ಮಾಡಿ ಚಿತ್ರದ ಬಗ್ಗೆ ಹೇಳಿದ್ದಾರೆ. ಕೆಲವರು ಐದಾರು ಬಾರಿ ಸಿನಿಮಾ ನೋಡಿದ್ದಾರೆ ಎಂದು ಅಭಿಷೇಕ್ ಅವರು ಹೇಳುವ ಮೂಲಕ ತಮ್ಮ ಮೊದಲ ಸಿನಿಮಾದ ಬಗ್ಗೆ ಬಂದ ನೆಗೆಟಿವ್ ಟಾಕ್ ಗಳ ಬಗ್ಗೆ ಕೂಲಾಗಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here