ಸ್ಯಾಂಡಲ್ ವುಡ್ ನಲ್ಲಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ಮೊದಲ ಸಿನಿಮಾ ಅಮರ್ ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಆಗುತ್ತಿದ್ದಂತೇ ಉತ್ತಮ ರೆಸ್ಪಾನ್ಸ್ ಸಹ ಪಡೆಯುತ್ತಿದೆ. ಅಮರ್ ಚಿತ್ರದ ಟೀಸರ್ ಈಗಿನ ಯೂಥ್ಸ್ ಗೆ ಸಖತ್ ಇಷ್ಟವಾಗುವಂತಿದ್ದು ಮೊದಲ ಪ್ರಯತ್ನವಾದರೂ ಸಹ ಅಭಿಷೇಕ್ ಅವರ ಶ್ರಮ ಎದ್ದು ಕಾಣುತ್ತಿದೆ. ಜ್ಯೂನಿಯರ್ ರೆಬೆಲ್ ಸ್ಟಾರ್ ಆಗಿ ಅಭಿಷೇಕ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಈ ಟೀಸರ್ ಮೂಲಕವೇ ಸಾಬೀತಾಗಿದೆ.

ಮೊದಲ ಸಿನಿಮಾ ಆದರೂ ಸಹ ಅಭಿಷೇಕ್ ಅಂಬರೀಶ್ ಅವರ ಅಭಿನಯ ಮತ್ತು ಮ್ಯಾನರಿಸಂ ಸ್ಟೈಲ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಗಳಿಗೆ ಸಖಯ್ ಖುಷಿ ನೀಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ‌ ಈ ಹಿಂದೆ ಅರಮನೆ , ಮೈನಾ , ಸಂಜು ಮತ್ತು ಗೀತಾ ಮತ್ತು ಮಾಸ್ತಿಗುಡಿ‌ ಚಿತ್ರಗಳನ್ನು ನಿರ್ದೇಶಿಸನ ಮಾಡಿದ್ದ ನಾಗಶೇಖರ್ ಅಂಬರೀಶ್ ಮಗನ ಮೊದಲ ಸಿನಿಮಾ ಅಮರ್ ಗೆ ನಿರ್ದೇಶನದ ಜವಬ್ದಾರಿ ಹೊತ್ತಿದ್ದಾರೆ.ಸಂದೇಶ್ ನಾಗರಾಜ್ ಅವರು ಅಮರ್ ಚಿತ್ರಕ್ಕೆ ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ.ಈ ಚಿತ್ರದ ವಿಶೇಷ ಪಾತ್ರದಲ್ಲಿ ದರ್ಶನ್, ಸಹ ನಟಿಸಿದ್ದಾರೆ. ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲಾ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ಸುಧಾರಾಣಿ, ನಿರೂಪ್ ಭಂಡಾರಿ, ಪ್ರಣಾಮ್ ದೇವರಾಜ್, ರಚಿತಾ ರಾಮ್ ಸಹ ಚಿತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ.ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ ವಿದ್ದು, ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ. ಸುಧಾರಾಣಿ, ನಿರೂಪ್ ಭಂಡಾರಿ, ರಚಿತಾ ರಾಮ್ ಸಹ ಚಿತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ. ಬಹುನಿರೀಕ್ಷೆಯ ಅಮರ್ ಚಿತ್ರದ ಟೀಸರ್ ಇಲ್ಲಿದೆ ನೋಡಿ….

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here