ರೆಬೆಲ್ ಸ್ಟಾರ್ ಅಂಬರೀಶ್ ಅವರ ನುಡಿ ನಮನ ಕಾರ್ಯಕ್ರಮವನ್ನು ಇಂದು ಮಂಡ್ಯದ ಸರ್. ಎಂ. ವಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ಪ್ರಮುಖರು ತಮ್ಮ ನುಡಿ ನಮನವನ್ನು ತಮ್ಮದೇ ಆದ ಮಾತುಗಳಲ್ಲಿ ಸಲ್ಲಿಸಿದ್ದಾರೆ. ಅವರು ರೆಬೆಲ್ ಸ್ಟಾರ್ ಜೊತೆಗಿನ ತಮ್ಮ ಅನುಭವಗಳನ್ನು ಹಾಗೂ ಅವರ ವ್ಯಕ್ತಿತ್ವ ಹಾಗೂ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಒಂದು ಅರ್ಥ ಪೂರ್ಣ ಹಾಗೂ ಪ್ರೀತಿಯ ಹಾಗೂ ಗೌರವದ ನುಡಿ ನಮನವನ್ನು ಅಂಬರೀಶ್ ಅವರಿಗೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಮಲತ , ಅವರ ಮಗ ಅಭಿಷೇಕ್, ರಾಕಿಂಗ್ ಸ್ಟಾರ್ ಯಶ್ , ಹ್ಯಾಟ್ರಿಕ್ ಹೀರೋ ಶಿವಣ್ಣ, ನವರಸ ನಾಯಕ ಜಗ್ಗೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ನುಡಿ ನಮನ ಸಲ್ಲಿಸಿದ ಪ್ರಮುಖರು.

ಅಂಬರೀಶ್ ಅವರ ಪತ್ನಿ ಸುಮಲತ ಅವರು ಮಾತನಾಡಲು ಆರಂಭ ಮಾಡಿದ ಕೂಡಲೇ ಭಾವುಕರಾದರು. ಅನಂತರ ಸಾವರಿಸಿಕೊಂಡು ಅಂಬರೀಶ್ ಅವರ 40 ವರ್ಷದ ಸಿನಿಮಾ,ಹಾಗೂ 20 ವರ್ಷಗಳ ರಾಜಕೀಯ ರಂಗದಲ್ಲಿ ಸಾಧನೆಗೆ ಜನರೇ ಕಾರಣ ಎಂದು ಹೇಳಿದರು. ಅಂಬಿ ನಿಧನವಾದಾಗ ಆತ್ಮಹತ್ಯೆಗೆ ಶರಣಾದವರ ಬಗ್ಗೆ ಮಾತನಾಡಿ, ಈ ರೀತಿ ಆತ್ಮಹತ್ಯೆ ಮೂಲಕ ಅಭಿಮಾನ ತೋರಬೇಡಿ ಎಂಬ ಸಲಹೆ ನೀಡಿದರು. ಮದುವೆಯಾದಾಗ ಅಂಬಿ ಅವರ ಜೊತೆ ಮಂಡ್ಯಕ್ಕೆ ಬರುತ್ತಿದ್ದ ವಿಚಾರ, ಇಲ್ಲಿನ ಜನರ ಆದರಾತಿಥ್ಯವನ್ನು ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ಅಂಬರೀಶ್ ಅವರ ತರಿಸುತ್ತಿದ್ದ ಸ್ಥಳೀಯ ಬೇಕರಿಯ ಕೇಕ್ ಸಿಹಿ ಯಷ್ಟೆ ಮಂಡ್ಯ ಜನರು ಕೂಡಾ ಸಿಹಿ ಎಂದರು.

ಅಲ್ಲದೆ ಅಂಬಿ ಅವರು ಮಂತ್ರಿಯಾಗಲು ಮಂಡ್ಯ ಜನ ಕಾರಣ ಎಂದು ಅವರೇ ಹಲವು ಬಾರಿ ಹೇಳಿದ್ದರೆಂಬ ವಿಚಾರವನ್ನು ನೆನಪಿಸಿದರು. ಅಂಬಿಯವರ 50 ನೇ ಜನ್ಮ ದಿನವನ್ನು ಅದೇ ಕ್ರೀಡಾಂಗಣದಲ್ಲಿ ಆಚರಿಸಿದ ಸವಿ ನೆನಪನ್ನು ಸ್ಮರಿಸಿದರು. ಆ ಸಂದರ್ಭದಲ್ಲಿ ರಜನಿಕಾಂತ್ ಅವರು ಅಂಬಿ ಹಣ ಸಂಪಾದನೆ ಮಾಡಲಿಲ್ಲ, ಬದಲಿಗೆ ಅಭಿಮಾನಿಗಳನ್ನು ಸಂಪಾದಿಸಿದರೆಂದು ಹೇಳಿದ್ದರು. ಅದು ಸತ್ಯವಾದ ಮಾತು ಎಂದು ಹೇಳುವುದನ್ನು ಮರೆಯಲಿಲ್ಲ. ಅಂಬಿ ಪಾರ್ಥಿವ ಶರೀರ ತಂದಾಗ ಮಂಡ್ಯ ಜನರ ಅವರನ್ನು ಕಂಡ ರೀತಿ ಸಾರ್ಥಕವಾದುದು. ಅಂಬಿಗೆ ನೀಡಿದ ಪ್ರೀತಿಯಲ್ಲಿ ಸ್ವಲ್ಪ ಅಭಿಷೇಕ್ ಮೇಲೆ ಇರಲಿ ಎಂದು ಅವರು ಮಂಡ್ಯದ ಜನರ ಮುಂದೆ ಕೈ ಮುಗಿದು ಮತ್ತೊಮ್ಮೆ ಭಾವುಕರಾದರು.

ನಂತರ ಅಭಿಷೇಕ್ ಮಾತು ಆರಂಭಿಸಿದರು.ಅಂಬರೀಶ್ ಪುತ್ರ ಅಭಿಷೇಕ್ ಮಾತನಾಡಿ, ನಮ್ಮಪ್ಪನ ಬಗ್ಗೆ ಹೆಚ್ಚಾಗಿ ನಾನು ಏನು ಹೇಳಲ್ಲ. ಅಂಬರೀಶ್ ಅವರು ಹೇಗಿದ್ದರು, ಹೇಗೆ ಹೋದರು ಅಂತ ನಿಮಗೆ ಗೊತ್ತು. ಹಣ ಮುಖ್ಯ ಅಲ್ಲ ಮಗನೇ ಜನ ಮುಖ್ಯ ಅಂತ ಅಪ್ಪ ಯಾವಾಗ್ಲೂ ಹೇಳುತ್ತಿದ್ದರು. ಅಂತ್ಯಸಂಸ್ಕಾರದಲ್ಲಿಯೂ ಅಭಿಮಾನವನ್ನು ಮಂಡ್ಯ ಜನತೆ ಮೆರೆಯಿತು. ನಿಮಗೆ ನಾನು ಚಿರಋಣಿ ಎಂದರು.ಅಭಿಷೇಕ್ ಮಾತನಾಡುವಾಗ ಕೆಲ ಅಭಿಮಾನಿಗಳು ಕೂಗಾಡುತ್ತಿದ್ದರು. ಈ ವೇಳೆ ಅಂಬಿ ಸ್ಟೇಲ್‍ನಲ್ಲಿಯೇ ಅಭಿಷೇಕ್ ಕೂಗಾಡಿ ನಮ್ಮಪ್ಪನಿಗೂ ಕೇಳಲಿ ಎಂದು ಭಾವುಕರಾದರು. ನಮ್ಮ ತಾಯಿ ನಿಮ್ಮ ಪ್ರೀತಿಯಲ್ಲಿ ಒಂದಿಷ್ಟು ಭಾಗ ಮಗ ಅಭಿಷೇಕ್ ಕೊಡಿ ಅಂತ ಕೇಳಿದ್ದಾರೆ. ಅಪ್ಪ ನಡೆದ ದಾರಿಯಲ್ಲಿ ನಡೆದರೆ ಅಷ್ಟೇ ಪ್ರೀತಿ ನಮಗೆ ಕೊಡುತ್ತಾರೆ ಎಂದು ಸುಮಲತಾ ಅವರಿಗೆ ಅಭಿಷೇಕ್ ಇದೇ ವೇಳೆ ಹೇಳಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here