ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪರಮವೈರಿಗಳಂತೆ ಕಿತ್ತಾಡಿದ್ದ ನಿಖಿಲ್‌ ಕುಮಾರಸ್ವಾಮಿ ಮತ್ತು ಅಭಿಷೇಕ್ ಅಂಬರೀಶ್‌ ಭಿನ್ನಮತ ಮರೆತು ಮತ್ತೆ ಒಂದಾಗಿದ್ದಾರೆ. ನಂಬುವುದು ಕಷ್ಟವಾದರೂ ಇದು ನಿಜ. ಇದಕ್ಕೆ ಪುರಾವೆ ಎಂಬಂತೆ ಇಂದು ನಿಖಿಲ್‌ ಕುಮಾರಸ್ವಾಮಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ, ಅಭಿಷೇಕ್‌ ಅಂಬರೀಶ್ ನಾಯಕನಾಗಿ ನಟಿಸುತ್ತಿರುವ ಅಮರ್ ಚಿತ್ರಕ್ಕೆ ಶುಭಹಾರೈಸಿದ್ದಾರೆ. ಅಭಿಯನ್ನು ‘ಮೈ ಬ್ರದರ್‌’ ಎಂದೇ ಸಂಬೋಧಿಸಿರುವ ನಿಖಿಲ್‌, ಚುನಾವಣೆಯ ಸೋಲಿನ ಕುರಿತೂ ಮಾತನಾಡಿದ್ದಾರೆ. ‘ನನ್ನ ಸಹೋದರ ಅಭಿಷೇಕ್‌ನ ಮೊದಲ ಸಿನಿಮಾ ಅಮರ್ ನಾಳೆ ಬಿಡುಗಡೆಯಾಗುತ್ತಿದೆ. ಅವನಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತೇನೆ.

ಅಮರ್‌ ಚಿತ್ರವನ್ನು ಚಿತ್ರಮಂದಿರಕ್ಕೆ ತೆರಳಿ ನೋಡಿ’ ಎಂದು ನಿಖಿಲ್ ಜನರಲ್ಲಿ ಕೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ, ‘ನನ್ನ ಮಾತುಗಳು ಜನರಿಗೆ ಬರೀ ಸೋಷಿಯಲ್ ಗೆಶ್ಚರ್‌ನಂತೆ ಕಾಣಿಸಬಹುದು. ಆದರೆ ನಾನು ಸಂಬಂಧಗಳಿಗೆ ಬೆಲೆ ಕೊಡುವವನು. ಇದನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಪದೇಪದೆ ಹೇಳುತ್ತ ಬಂದಿದ್ದೇನೆ. ಚುನಾವಣೆಯಲ್ಲಿ ಗೆದ್ದಿರುವ ಸುಮಕ್ಕ ಅವರಿಗೆ ಅಭಿನಂದನೆ ಸಲ್ಲಿಸಲು ಇಷ್ಟಪಡುತ್ತೇನೆ. ಮಂಡ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ನಾನು ಅವರ ಜತೆಗೆ ಇರುತ್ತೇನೆ’ ಎಂದೂ ಅವರು ಹೇಳಿಕೊಂಡಿದ್ದಾರೆ.

ಹಾಗೆಯೇ ಮುಂದುವರಿದು ಲೋಕಸಭೆ ಚುನಾವಣೆಯ ಸೋಲಿನ ಹೊಣೆಯನ್ನು ಸಂಪೂರ್ಣವಾಗಿ ತಮ್ಮ ಮೇಲೆಯೇ ಹೊರಿಸಿಕೊಂಡಿರುವ ಅವರು, ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಗಳಿಸುವ ನಂಬಿಕೆಯನ್ನೂ ವ್ಯಕ್ತಪಡಿಸಿದ್ದಾರೆ. “ನಿನ್ನ ಈ ಬೆಂಬಲಕ್ಕೆ ತುಂಬಾ ಧನ್ಯವಾದಗಳು ಸಹೋದರ. ನನಗೆ ಗೊತ್ತು ಮೊದಲ ಚಿತ್ರ ರಿಲೀಸ್ ಗೂ ಮೊದಲು ಎಷ್ಟು ಒತ್ತಡ ಇರುತ್ತೆ ಎನ್ನುವುದು. ನಿನ್ನ ಈ ಮಾತುಗಳು ಚಿತ್ರರಂಗದಲ್ಲಿ ಒಗ್ಗಟ್ಟಿನಿಂದ ಮತ್ತು ಪ್ರೀತಿಯಿಂದ ಮತ್ತದೆ ಹುಮ್ಮಸ್ಸಿನ ಜೊತೆಗೆ ಮುಂದುವರೆಯಲು ಸಹಾಯಕವಾಗಲಿದೆ. ಈ ಮಾತುಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು” ಎಂದು ಗೆಳೆಯನ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.”ಒಬ್ಬ ಸ್ನೇಹಿತನಾಗಿ ಯಾವಾಗಲು ನಿನ್ನ ಯಶಸ್ಸನ್ನು ಬಯಸುತ್ತೇನೆ.

ಇದು ನಿನ್ನ ಹಿನ್ನಡೆ ಎಂದು ತಿಳಿದುಕೊಳ್ಳಬೇಡ. ನಿನಗೂ ಗೊತ್ತು ಈ ಇದೆಲ್ಲ ಜೀವನದ ಒಂದು ಭಾಗ ಅಷ್ಟೆ ಎಂದು. ಮಂಡ್ಯದ ಜಿಲ್ಲೆಗೆ ನಿನ್ನ ಈ ಮಾತುಗಳು ಪ್ರೋತ್ಸಾಹದಾಯಕವಾಗಿರಲಿದೆ. ಮತ್ತು ಮಂಡ್ಯ ಜಿಲ್ಲೆಯ ಉತ್ತಮ ಅಭಿವೃದ್ಧಿಗೆ ಒಟ್ಟಿಗೆ ಕೆಲಸ ಮಾಡೋಣ””ನಿನ್ನ ಈ ಮಾತುಗಳಿಂದ ಕೇವಲ ಮಂಡ್ಯ ಮಾತ್ರವಲ್ಲ, ಇಡೀ ಕರ್ನಾಟಕ ನಿನ್ನ ಈ ಒಳ್ಳೆತನವನ್ನು ಪ್ರಶಂಶಿಸುತ್ತದೆ. ಒಳ್ಳೆಯದಾಗಲಿ ನಿನಗೆ. ನೀನು ಯಾವಾಗಲು ನನ್ನ ಸ್ನೇಹಿತ” ಎಂದು ನಿಖಿಲ್ ಮಾತಿಗೆ ಗೆಳೆಯ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ಮಾತುಗಳಿಗೆ ಸುಮಲತ ಅಂಬರೀಶ್ ಸಹ ಖುಷಿ‌ ವ್ಯಕ್ತಪಡಿಸಿದ್ದು ಟ್ವೀಟ್ ಮಾಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here