ಕನ್ನಡ ಚಿತ್ರರಂಗದ ಕಲಿಯುಗ ಕರ್ಣ ,ರೆಬೆಲ್ ಸ್ಟಾರ್ ಅಂಬರೀಶ್ ಅವರು ಈಗ ದೈಹಿಕವಾಗಿ ನಮ್ಮ ಜೊತೆ ಇಲ್ಲ. ಹಾಗೆಂದ ಮಾತ್ರಕ್ಕೆ ಅವರ ನೆನಪುಗಳು ನಮ್ಮಿಂದ ಅಳಿಸಲೂ ಸಾಧ್ಯವಿಲ್ಲ. ಅಂಬರೀಶ್ ನಿರ್ಗಮನ ಸಹಜವಾಗಿಯೇ ಕುಟುಂಬಕ್ಕೆ ನುಂಗಲಾರದ ನೋವು ನೀಡಿದೆ.ಇಷ್ಟು ದಿನಗಳು ನೋವಿನಲ್ಲೇ ಕಾಲ ಕಳೆದ ಅಂಬರೀಶ್ ಪುತ್ರ ಅಭಿಷೇಕ್ ಈಗ ತಮ್ಮ ಮುಂದಿನ ಕೆಲಸಗಳತ್ತ ಗಮನ ಹರಿಸಿದ್ದಾರೆ. ಅಂಬರೀಶ್ ಅವರ ಅಭಿಮಾನಿಗಳ ಆಸೆ ಪೂರೈಸುವ ಹಾಗೂ ಅಂಬರೀಶ್ ಉತ್ತರಾಧಿಕಾರಿ ಆಗಿರುವ ಹೊಣೆ ಹೊತ್ತಿರುವ ಅಭಿಷೇಕ್ ಅವರು ಇದೀಗ ಅಮರ್ ಚಿತ್ರದ ಚಿತ್ರೀಕರಣದತ್ತ ಗಮನ ಹರಿಸಲು ಪ್ರಯತ್ನಿಸುತ್ತಿದ್ದಾರೆ. ಅದರಂತೆಯೇ ಅಭಿಷೇಕ್ ಅಂಬರೀಶ್ ಅವರು ಈಗ ತಮ್ಮ ನಟನೆಯ ಮೊದಲ ಸಿನಿಮಾ ಅಮರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಪ್ಪನ ಫೋಟೋ ಹಿಡಿದುಕೊಂಡಿರೋ ತನ್ನ ಫೋಟೋವೊಂದನ್ನು ಅಭಿಷೇಕ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಆ ಫೋಟೋದ ಮೇಲೆ ಮತ್ತೆ ಕೆಲಸಕ್ಕೆ ತೆರಳುತ್ತಿರುವೆ. ನನ್ನಪ್ಪ ರೆಬೆಲ್ ಇದನ್ನೆಲ್ಲ ನೋಡುತ್ತಿದ್ದಾರೆ ಅಂತಾ ಭಾವುಕವಾಗಿ ಬರೆದುಕೊಂಡಿದ್ದಾರೆ.ಸದ್ಯ ಅಪ್ಪನ ಫೋಟೋ ಹಿಡಿದು ಮತ್ತೆ ಕೆಲಸಕ್ಕೆ ಹೋಗುತ್ತಿರುವೆ ಅಂತಾ ಬರೆದಿರುವ ಅಭಿಷೇಕ್ ಅಂಬರೀಶ್ ಅವರಿಗೆ ಕನ್ನಡದ ಅಭಿಮಾನಿಗಳು ಶುಭಾಷಯ ತಿಳಿಸಿದ್ದು  , ನಿಮಗೆ ಕನ್ನಡಿಗರ ಆಶೀರ್ವಾದ ಇರುತ್ತದೆ , ನಿಮ್ಮತಂದೆ ನಿಮಗೆ ಸದಾ ಹಾರೈಸುತ್ತಿರುತ್ತಾರೆ.

ಹಾಗೆಯೇ ನಿಮ್ಮ ಸಿನಿಮಾ ಕ್ಷೇತ್ರದ ಜರ್ನಿ ಚೆನ್ನಾಗಿರಲಿ ಅಂತಾ ಎಲ್ಲರೂ ಶುಭ ಹಾರೈಸಿದ್ದಾರೆ.ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here