ಆ್ಯಸಿಡಿಟಿ ನಿವಾರಣೆಗೆ ಮನೆಯ ಮದ್ದು ????

ಆ್ಯಸಿಡಿಟಿ ಅಂತ ಒದ್ದಾಡುತ್ತೀರಲ್ಲ. ಅದು ಬಾರದಂತೆ ಯೋಗ್ಯ ಆಹಾರಕ್ರಮ , ಜೀವನಶೈಲಿ ಅನುಸರಿಸಿದರೆ ಅದು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಕೆಲವು ತರಕಾರಿ ಅಥವಾ ಆಹಾರ ಪದಾರ್ಥ ಆ್ಯಸಿಡಿಟಿ ಉಂಟು ಮಾಡುತ್ತದೆ ಅಂದರೆ ಅವುಗಳ ಸೇವನೆಯನ್ನು ನಿಲ್ಲಿಸಿಬಿಡಿ.

ಅವಸರದಲ್ಲಿ ಊಟ ಮಾಡಬೇಡಿ. ಊಟವಾದಾಕ್ಷಣ ನಿದ್ದೆ ಮಾಡಬೇಡಿ. ಟೀ,ಕಾಫಿ ಅವೈಡ್‌ ಮಾಡಿ. ಹುರಿದ ಆಹಾರ ಪದಾರ್ಥ, ಉಪ್ಪಿನಕಾಯಿ, ವಿಪರೀತ ಖಾರದ ಆಹಾರ ಪದಾರ್ಥ, ವಿನೆಗರ್‌ಮತ್ತು ಚಾಕಲೇಟ್‌ ತಿನ್ನೋದು ಒಳ್ಳೆಯದಲ್ಲ.

ಪಾಲಾಕ್‌ ಸೊಪ್ಪು, ಮೆಂತ್ಯೆ, ಎಲೆಕೋಸು, ಹೂಕೋಸು ಆಹಾರದಲ್ಲಿ ಹೆಚ್ಚಿರಲಿ. ಇವುಗಳಲ್ಲಿ ಮಿನರಲ್‌ ಮತ್ತು ಪೋಷಕಾಂಶಗಳು ದೊರೆಯುತ್ತವೆ. ಮೊಟ್ಟೆಯ ಬಿಳಿ ಭಾಗ ನಿಮ್ಮ ಆಹಾರದೊಂದಿಗಿರಲಿ. ಇದು ಬೇಗನೆ ಜೀರ್ಣಗೊಳ್ಳುತ್ತದೆ. ಕೆಂಪಕ್ಕಿ ಅನ್ನ ಸುಲಭವಾಗಿ ಜೀರ್ಣವಾಗುತ್ತದೆ. ಬಿಳಿ ಅಕ್ಕಿಗಿಂತ ಕೆಂಪಕ್ಕಿ ಅನ್ನ ಆರೋಗ್ಯಕ್ಕೆ ಒಳ್ಳೆಯದು.

ನಿತ್ಯ ಬಾಳೆಹಣ್ಣು ಸೇವಿಸಿ. ಪುದಿನಾ ರಸವನ್ನು ಸೇವಿಸುವುದರಿಂದ ಆ್ಯಸಿಡಿಟಿ ಸಮಸ್ಯೆಯಿಂದ ಪಾರಾಗಬಹುದು. ಕ್ಯಾಬೀಜ್‌ದ ಜ್ಯೂಸ್‌ ನಿತ್ಯ ಸೇವಿಸುವುದರಿಂದ ಆ್ಯಸಿಡಿಟಿ ನಿಯಂತ್ರಣಕ್ಕೆ ಬರುತ್ತದೆ. ಒಂದೆರಡು ಚಮಚ ಬಿಳಿ ವಿನೆಗರ್‌ ಸೇವಿಸಿ. ಒಂದು ಲೋಟ ತಣ್ಣನೆ ಹಾಲು ಕುಡಿಯಿರಿ. ನಿತ್ಯ ಎಳೆನೀರು ಕುಡಿಯಿರಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here