ಸ್ಯಾಂಡಲ್ ವುಡ್ ನ ಆ್ಯಕ್ಷನ್ ಪ್ರಿನ್ಸ್ ಎಂದೊಡನೆ ತಟ್ಟನೆ ನಮಗೆ ನೆನಪಾಗುವುದು, ಕನ್ನಡ ಚಿತ್ರರಂಗದ ಉದಯೋನ್ಮುಖ, ಯುವ ಪ್ರತಿಭೆ ಹಾಗೂ ಭರವಸೆಯ ಯುವ ನಟ ಧೃವ ಸರ್ಜಾ ಅವರ ಅಭಿಮಾನಿಗಳು ಅನೇಕ. ಅವರನ್ನು ನೋಡಲು ದಿನ, ಪ್ರತಿದಿನ ಅವರ ಮನೆಯ ಬಳಿಗೆ ಅಪಾರವಾದ ಅಭಿಮಾನಿಗಳ ದಂಡೇ ಭೇಟಿ ನೀಡುತ್ತಾರೆ ಹಾಗೂ ಅವರೊಂದಿಗೆ ಸೆಲ್ಫಿಗಳನ್ನು, ಫೋಟೋಗಳನ್ನು ತೆಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದನ್ನು ನಾವೆಲ್ಲರೂ ನೋಡುತ್ತಿರುತ್ತೇವೆ. ಧೃವ ಅವರು ಕೂಡಾ ಅಭಿಮಾನಿಗಳ ಜೊತೆಗೆ ಬಹಳ ಆತ್ಮೀಯವಾಗಿ ಫೋಟೋ ತೆಗೆಸಿಕೊಳ್ಳುವುದನ್ನು ಕೂಡಾ ನೋಡಿದ್ದೇವೆ.

ಧೃವ ಅವರ ಮಹಿಳಾ ಅಭಿಮಾನಿಗಳಿಗೂ ಕೊರತೆಯೇನಿಲ್ಲ‌. ಆ್ಯಕ್ಷನ್ ಪ್ರಿನ್ಸ್ ಅವರ ಅದ್ದೂರಿ, ಬಹದ್ದೂರ್ ಹಾಗೂ ಭರ್ಜರಿ ಸಿನಿಮಾಗಳಲ್ಲಿ ಅವರ ನಟನೆ, ಲವರ್ ಬಾಯ್ ಆಗಿ ಅವರ ನಟನೆಯು ಯುವತಿಯರ ಹೃದಯದಲ್ಲಿ ಲಗ್ಗೆ ಇಟ್ಟಿದೆ. ಅದಕ್ಕಾಗಿಯೇ ಅನೇಕ ಯುವತಿಯರು ಅವರ ಅಭಿಮಾನಿಗಳಾಗಿದ್ದಾರೆ. ಹೀಗೆ ಅವರ ಅಭಿಮಾನಿಯಾದ ಯುವತಿಯೊಬ್ಬಳು ಅವರನ್ನು ಭೇಟಿ ಮಾಡಲು ಹೋದಾಗ, ತನ್ನ ಅಭಿಮಾನ ನಟನ ಬಗ್ಗೆ , ತನ್ನ ಅಭಿಮಾನವನ್ನು ಅವರ ಚಿತ್ರದ ಡೈಲಾಗನ್ನು ಹೇಳುವ ಮೂಲಕ ಪ್ರದರ್ಶಿಸಿದ್ದಾರೆ.

ಕಟ್ಟೋ ಬಿಲ್ಡಿಂಗ್ ಎಲ್ಲಾ ತಾಜ್ ಮಹಲ್ ಆಗೋಲ್ಲ, ಪ್ರೀತ್ಸೋರಂತೂ ಲೈಲಾ ಮಜ್ನು ಆಗಲ್ಲ, ನಿಮ್ಮಪ್ಪ ನೋಡಿರೋ ಯಾವ್ದೇ ಹುಡುಗರು ನನ್ನಷ್ಟು ಅದ್ದೂರಿಯಾಗಿ ಲವ್ ಮಾಡೋಕಾಗಲ್ಲ, ಎಂಬ ಒಂದು ಖಡಕ್ ಹಾಗೂ ಜಬರ್ದಸ್ತ್ ಡೈಲಾಗನ್ನು ಹೇಳಿ ಧೃವ ಅವರಿಗೆ ಸಂತಸವನ್ನು ತಂದಿದ್ದಾರೆ. ಇನ್ನು ಆ ಹುಡುಗಿ ಹೇಳಿರೋ ಡೈಲಾಗಿಗೆ ಅಲ್ಲಿದ್ದ ಎಲ್ಲಾ ಅಭಿಮಾನಿಗಳು ಚಪ್ಪಾಳೆ ತಟ್ಟೆ, ವಿಷಲ್ ಹಾಕಿ ಸಂಭ್ರಮಿಸಿದರೆ, ಧೃವ ಸರ್ಜಾ ಅವರು ಆ ಯುವತಿಯನ್ನು ಅಭಿನಂದಿಸಿದ್ದಾರೆ. ಅಭಿಮಾನಿಗಳಿಗೆ ನಿಜಕ್ಕೂ ನೆಚ್ಚಿನ ನಟ ನಟಿಯರೆಂದರೆ ಒಂದು ರೀತಿಯ ಕ್ರೇಜ್ ಎನ್ನುವುದಕ್ಕೆ ಇದು ಉದಾಹರಣೆ.ಈ ವೀಡಿಯೋ ನೋಡಿ..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here