City Big News Desk.
ಬಾಲಿವುಡ್ನ ಎವರ್ಗ್ರೀನ್ ಜೋಡಿಗಳಲ್ಲಿ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಕೂಡ ಒಬ್ಬರು. ಇಬ್ಬರ ಆಫ್ಸ್ಕ್ರೀನ್ ಕೆಮಿಸ್ಟ್ರಿಯನ್ನು ಅನೇಕರು ಇಷ್ಟಪಡುತ್ತಾರೆ. ಇಬ್ಬರೂ ತಮ್ಮ ಹಾಸ್ಯದ ಮೂಲಕವೇ ಸಂದರ್ಶನಗಳಲ್ಲಿ ಗಮನ ಸೆಳೆದರೂ ಸಹ ಹಿಂದೊಮ್ಮೆ ರ್ಯಾಂಪ್ ವಾಕ್ ಮಾಡುವ ಸಂದರ್ಭದಲ್ಲಿ ಮೋಜಿಗಾಗಿ ಏನನ್ನೋ ಮಾಡಲು ಹೋಗಿ ವಿವಾದಕ್ಕೆ ಸಿಲುಕಿದ್ದರು.
ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ರ್ಯಾಂಪ್ ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಅಕ್ಷಯ್, ಟ್ವಿಂಕಲ್ ಕಡೆ ತಿರುಗಿ ತಮ್ಮ ಪ್ಯಾಂಟ್ನ ಝಿಪ್ ತೆಗೆಯುವಂತೆ ಹೇಳಿದ್ದರು. ಟ್ವಿಂಕಲ್ ಖನ್ನಾ ಮೊದಲು ಇದನ್ನು ಮಾಡಲು ಹಿಂಜರಿದರೂ ಸಹ ಬಳಿಕ ಝಿಪ್ ತೆರೆದಿದ್ದರು. ಒಂದು ವೇಳೆ ಟ್ವಿಂಕಲ್ ಖನ್ನಾ ಅಂದು ಪತಿಯ ಮಾತನ್ನು ಕೇಳದೇ ಹೋಗಿದ್ದರೆ ಅವರು ಅಷ್ಟು ದೊಡ್ಡ ವಿವಾದದಲ್ಲಿ ಸಿಲುಕುತ್ತಲೇ ಇರಲಿಲ್ಲ.
ಅಕ್ಷಯ್ ಕುಮಾರ್ ಬೆಲ್ಟ್ ತೆಗೆದ ಟ್ವಿಂಕಲ್ ಖನ್ನಾ, ಬಳಿಕ ಅಕ್ಷಯ್ ಕುಮಾರ್ ಜೀನ್ಸ್ ಪ್ಯಾಂಟ್ ಬಿಚ್ಚಿದ್ದರು. ಅಲ್ಲಿದ್ದ ಪ್ರೇಕ್ಷಕರೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಅಕ್ಷಯ್ ಕುಮಾರ್ ದಂಪತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ ಅವರ ಬಂಧನ ಕೂಡ ಆಗಿತ್ತು. ಇದಾದ ಬಳಿಕ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಟ್ವಿಂಕಲ್ ಈ ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದರು.
ಘಟನೆಯನ್ನು ನೆನಪಿಸಿಕೊಂಡ ನಟಿ, ಲಕ್ಷಾಂತರ ಜನರು ಪ್ಯಾಂಟ್ ಜಿಪ್ ಬಿಚ್ಚುತ್ತಾರೆ, ಪೊಲೀಸ್ ಠಾಣೆಯ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ ಅವರ ಬಂಧನ ಆಗುವುದಿಲ್ಲ. ಆದರೆ ನನ್ನನ್ನು ಬಂಧಿಸಲಾಗಿತ್ತು ಎಂದು ಹೇಳಿದ್ದಾರೆ.
ಕರಣ್ ಜೋಹರ್ ಟ್ವಿಂಕಲ್ ಖನ್ನಾರನ್ನು , “ಆ ಪ್ರಕರಣ ಇನ್ನೂ ಇದೆಯೇ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಟ್ವಿಂಕಲ್ ಖನ್ನಾ, “ಹೌದು! ಆದರೆ ನಾನು ಮಾತ್ರ ಆ ಪ್ರಕರಣದಲ್ಲಿದ್ದೇನೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಅಕ್ಷಯ್ ಕುಮಾರ್ ಈ ಪ್ರಕರಣದಲ್ಲಿ ಆರೋಪಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಟ್ವಿಂಕಲ್ ಖನ್ನಾ, ನಮ್ಮ ವಕೀಲರು ಇಬ್ಬರಲ್ಲಿ ಒಬ್ಬರನ್ನು ಪ್ರಕರಣದಿಂದ ನಿರ್ದೋಷಿ ಸಾಬೀತು ಮಾಡಬಹುದು ಎಂದು ಹೇಳಿದರು. ಅದಾದ ಮೇಲೆ ಈ ಪ್ರಕರಣವನ್ನು ನಾನು ಸ್ವ ಇಚ್ಛೆಯಿಂದ ಅಕ್ಷಯ್ ಮೇಲೆ ಹಲ್ಲೆ ನಡೆಸಿ ಅವರ ಪ್ಯಾಂಟ್ ಜಿಪ್ ಸಾರ್ವಜನಿಕವಾಗಿ ತೆರೆದಿದ್ದೇನೆ ಎಂದು ಹೇಳಲಾಯ್ತು. ನಾನು ಈಗ 500 ರೂಪಾಯಿ ಬಾಂಡ್ನ ಜಾಮೀನಿನ ಮೇಲೆ ಹೊರಗಿದ್ದೇನೆ. ಈಗಲೂ ವಿಕಿಪಿಡೀಯಾದಲ್ಲಿ ಅಶ್ಲೀಲ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ ಎಂದು ನನ್ನ ಬಗ್ಗೆ ಬರೆಯಲಾಗಿದೆ ಎಂದು ಹೇಳಿದರು.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.