ಕನ್ನಡದ ಖ್ಯಾತ ನಟ ಕೋಮಲ್ ಅವರ ಮೇಲೆ ಹಾಡುಹಗಲಲ್ಲೇ ನಡು ರಸ್ತೆಯಲ್ಲಿ ಹಲ್ಲೆ ನಡೆದಿರುವ ಘಟನೆಯು ಬೆಂಗಳೂರಿನಲ್ಲಿ ಇಂದು ನಡೆದಿದೆ.‌ ಇಂದು ಕೋಮಲ್ ಅವರು ಮಲ್ಲೇಶ್ವರ ಬಳಿ ಹೋಗುತ್ತಿದ್ದಾಗ ಅವರ ಕಾರಿಗೆ ಟ್ರಾಫಿಕ್ ನಲ್ಲಿ ಮತ್ತೊಂದು ಕೋರು ಟಚ್ ಆಗಿದೆ. ಆಗ ಕೋಮಲ್ ಅವರು ಕಾರಿನಿಂದ ಇಳಿದು, ವಾಹನದ ಚಾಲಕನ ಜೊತೆ ವಾಗ್ವಾದ ನಡಸಿದ್ದಾರೆ. ಅವರ ಮಾತು ತಾರಕಕ್ಕೇರಿದೆ. ನಂತರ ಜಗಳ ಮಾತಿನ ಹಂತ ಮೀರಿ ಇಬ್ಬರೂ ಇಬ್ಬರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ ಅವರ ಜಗಳ. ಆಗ ಕೋಪಗೊಂಡ ನಟ ಕೋಮಲ್ ಅವರು ತಮ್ಮ ಜೊತೆ ವಾಗ್ವಾದ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ.

ಕೋಮಲ್ ಅವರು ಹೊಡೆದಾಗ ಆ ವ್ಯಕ್ತಿ ಅವರು ವಿರುದ್ಧ ತಿರುಗಿ ಬಿದ್ದಿದ್ದಾನೆ. ಆಗ ಆತನ ಸ್ನೇಹಿತರು ಕೂಡಾ ಜೊತೆಯಲ್ಲಿ ಇದ್ದ ಕಾರಣ ಅವರು ಸ್ನೇಹಿತನ ನೆರವಿಗೆ ಧಾವಿಸಿ, ಎಲ್ಲರೂ ಒಟ್ಟಾಗಿ ಕೋಮಲ್ ಅವರಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಇನ್ನು ಈ ಘಟನೆ ನಡೆಯುವಾಗ ಆ ಸ್ಥಳದಲ್ಲಿ ಪೊಲೀಸರು ಉಪಸ್ಥಿತರಿದ್ದರು ಎನ್ನಲಾಗಿದೆ. ಪೊಲೀಸರ ಎದುರೇ ನಟನ ಮೇಲೆ ಹಲ್ಲೆ ನಡೆದುದ್ದನ್ನು ಕಂಡ ಜನರು ಗಾಬರಿಯಾಗಿ, ನಂತರ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ನಂತರ ಈ ವಿಷಯದ‌ ಮಾಹಿತಿ ದೊರೆತ ಮಲ್ಲೇಶ್ವರ ಪೊಲೀಸರು ಬಂದು ವ್ಯಕ್ತಿ ಮತ್ತು ಕೋಮಲ್ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ವಿಷಯ ತಿಳಿದು ನಟ ಜಗ್ಗೇಶ್ ಅವರು ಠಾಣೆಗೆ ಆಗಮಿಸಿದ್ದಾರೆನ್ನಲಾಗಿದೆ. ಪ್ರಸ್ತುತ ಕೋಮಲ್ ಮತ್ತು ಅವರ ಜೊತೆ ಗಲಾಟೆ ಮಾಡಿಕೊಂಡ ವ್ಯಕ್ತಿಯನ್ನ ಮಲ್ಲೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದ್ದು, ವಿಚಾರಣೆಯಲ್ಲಿ ಇಬ್ಬರಲ್ಲಿ ತಪ್ಪು ಯಾರದ್ದು,ಗಲಾಟೆಗೆ ಕಾರಣವೇನೆಂದು ತಿಳಿದು ಅನಂತರ ದೂರು ದಾಖಲಿಸಲಾಗುವುದು ಎನ್ನಲಾಗಿದ್ದು, ಹಲ್ಲೆಯಲ್ಲಿ ಗಾಯಗೊಂಡಿದ್ದ ನಟ ಕೋಮಲ್ ಅವರ ಪ್ರಥಮ ಚಿಕಿತ್ಸೆ ಮಾಡಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here