ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಗೆ ಸುಮಾರು 350 ಬಸ್ಸುಗಳನ್ನು ಹೆಚ್ಚುವರಿಯಾಗಿ ಇದೆ ಅಕ್ಟೋಬರ್ 15 ರಿಂದ ರೋಡಿಗಿಳಿಸಲು ಮುಂದಾಗಿದ್ದಾರೆ.
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆಯನ್ನು ಜಾರಿ ಮಾಡಿರುವುದರಿಂದ ಈ ಬಾರಿ ಮೈಸೂರು ದಸರಾಗೆ ಹೆಚ್ಚುವರಿಯಲ್ಲಿ ಹೆಣ್ಣು ಮಕ್ಕಳು ಆಗಮಿಸುವ ಸಾಧ್ಯತೆ ಇದೆ. ಅದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದೆಂದು ರಾಜ್ಯ ಸರ್ಕಾರ ಈ ತೀರ್ಮಾನಿಸಿ ಹೆಚ್ಚುವರಿ 350 ರಾಜ್ಯದಾದ್ಯಂತ ಬಸ್ಸುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಹೌದು, ದಸರಾ ಹಬ್ಬಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿಯಿಂದ ಹೆಚ್ಚುವರಿಯಾಗಿ 350 ಬಸ್ಗಳನ್ನು ರಸ್ತೆಗಳಿಸಲಾಗುತ್ತಿದೆ. ಈ ಮೂಲಕ ಮೈಸೂರಿಗೆ ರಾಜ್ಯ ವಿವಿಧೆಡೆಯಿಂದ ಸುಲಭವಾಗಿ ಬಸ್ಗಳು ಲಭ್ಯವಾಗಲಿವೆ.
ವರ್ಷಕ್ಕೆ ಒಮ್ಮೆ ನಡೆಯುವ ವಿಶ್ವವಿಖ್ಯಾತ ದಸರಾ ಜಂಬು ಸವಾರಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಜನ ಮೈಸೂರಿಗೆ ತೆರಳಲು ಮುಂದಾಗುತ್ತಾರೆ. ಅದರಲ್ಲೂ ನವರಾತ್ರಿಯ ಎಲ್ಲಾ ದಿನಗಳಲ್ಲಿಯೂ ಮೈಸೂರು ನಗರದಲ್ಲಿ ವಿವಿಧ ಕಾರ್ಯಕ್ರಮ ಇದ್ದು, ಆ 9 ದಿನ ಜನರ ಆಗಮನ ನಿರ್ಗಮನ ಹೆಚ್ಚಿರುತ್ತದೆ ಹೀಗಾಗಿ, ಸದ್ಯ ಮೈಸೂರು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ 1000 ಬಸ್ಗಳ ಜತೆಗೆ ಅಕ್ಟೋಬರ್ 15 ರಿಂದ ಹೆಚ್ಚುವರಿಯಾಗಿ 350 ಬಸ್ ಕಾರ್ಯಾಚರಣೆ ನಡೆಸಲಿವೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.