ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಮಾತನಾಡುವಾಗ ಹೇಳಿರುವ ಒಂದು ವಿಷಯ ಈಗ ಹೊಸ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ‌. ಅದೇನೆಂದರೆ ಆಧಾರ್ ಕಾರ್ಡ್ ನ ಜಾಗದಲ್ಲಿ ಹೊಸ ಕಾರ್ಡ್ ಬರಲಿದೆಯಾ? ಎಂದು. ಹೌದು ಈ ಅನುಮಾನಕ್ಕೆ ಕಾರಣವಾಗಿರುವುದು ಅಮಿತ್ ಶಾ ಅವರು ಭಾಷಣ ಮಾಡುತ್ತಾ ಹೇಳಿರುವ ವಿಚಾರಗಳು‌. ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಗೆ ಇತಿ ಶ್ರೀ ಹಾಡಲು ಹೊರಟಿದೆಯಾ? ಎನ್ನುವ ಅನುಮಾನ ಈಗ ಮೂಡಿದೆ.

ಅಮಿತ್ ಶಾ ಅವರು ಮಾತನಾಡುವ ಸಂದರ್ಭದಲ್ಲಿ ದೇಶದ ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್ , ಓಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳ ಬದಲಾಗಿ ಎಲ್ಲ ಸೌಲಭ್ಯಗಳನ್ನು ನೀಡುವ ಒಂದೇ ಕಾರ್ಡ್ ಇದ್ದರೆ ಅದು ಬಹುಪಯೋಗಿ ಆಗಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಇಂತಹ ಒಂದು ಮಲ್ಟಿ ಪರ್ಪಸ್ ಕಾರ್ಡ್ ಇದ್ದರೆ ದೇಶದ ಬಹು ಸಮಸ್ಯೆಗಳಿಗೆ ಉತ್ತರ ದೊರಕಿದಂತಾಗುತ್ತದೆ ಎಂದು ತಮ್ಮ ಮಾತಿನಲ್ಲಿ ಹೇಳಿದ್ದಾರೆ. ಸಮಸ್ಯೆಗಳ ಪರಿಹಾರ ಶೀಘ್ರವಾಗಿ ಆಗಲು ಇದು ನೆರವಾಗಬಲ್ಲುದು ಎಂದಿದ್ದಾರೆ.

ಆದರೆ ಕೇಂದ್ರ ಅಧಿಕೃತವಾಗಿ ಇಂತಹುದೊಂದು ಬಹುಪಯೋಗಿ ಕಾರ್ಡ್ ಜಾರಿ ತರಲಿದೆಯಾ ಎಂಬ ಮಾಹಿತಿಯನ್ನು ಅವರು ನೀಡಿಲ್ಲವಾದರೂ, ಇಂತಹದೊಂದು ಕಾರ್ಡ್ ಇದ್ದರೆ ಉಪಯುಕ್ತ ಎಂದಷ್ಟೇ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮುಂಬರುವ ಅಂದರೆ 2021 ರಲ್ಲಿ ನಡೆಯಬೇಕಿರುವ ಜನ ಗಣತಿಯ ಪ್ರಕ್ರಿಯೆಯನ್ನು ಮೊಬೈಲ್ ಆ್ಯಪ್ ಮೂಲಕ ಮಾಡುವ ಯೋಜನೆಯಿದೆ ಎಂಬ ಮಾಹಿತಿಯನ್ನು ಕೂಡಾ ನೀಡಿದ್ದಾರೆ. ಅಲ್ಲದೆ ಸೆನ್ಸಸ್ ಮತ್ತು ಎನ್.ಪಿ.ಆರ್.ಗಾಗಿ 12,000 ಕೋಟಿ ಖರ್ಚು ಮಾಡುತ್ತಿದ್ದು, ಪೇಪರ್ ಬದಲು, ಜನಗಣತಿ ಡಿಜಿಟಲ್ ಆಗಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here