ಈ ಮಾಸಾಂತ್ಯದೊಳಗೆ (ಮಾರ್ಚ್ 31) ಪ್ಯಾನ್ ಸಂಖ್ಯೆಗೆ ಆಧಾರ್ ಕಾರ್ಡ್‌ನ್ನು ಜೋಡಣೆ ಮಾಡದಿದ್ದರೆ ಪ್ಯಾನ್‌ಕಾರ್ಡ್ ನಿಷ್ಕ್ರಿಯವಾಗುವುದರೊಂದಿಗೆ 10 ಸಾವಿರ ರೂಗಳ ದಂಡ ಸಹ ತೆರಬೇಕಾಗುತ್ತದೆ. ಪ್ಯಾನ್‌ಕಾರ್ಡ್‌ದಾರರಿಗೆ ಸ್ಪಷ್ಟ ಎಚ್ಚರಿಕೆ ನೀಡಿರುವ ಆದಾಯ ತೆರಿಗೆ ಇಲಾಖೆ, ಗಡುವಿನೊಳಗೆ ಪ್ಯಾನ್‌ಸಂಖ್ಯೆಗೆ ಆಧಾರ್‌ಸಂಖ್ಯೆಯನ್ನು ಜೋಡಣೆ ಮಾಡದಿದ್ದರೆ ಅಥವಾ ನಿಷ್ಕ್ರಿಯಗೊಂಡಿರುವ ಪ್ಯಾನ್‌ಕಾರ್ಡ್ ಬಳಸುವುದು ಕಂಡುಬಂದಲ್ಲಿ ಆದಾಯ ತೆರಿಗೆ ದಂಡಸಂಹಿತೆ 272ಬಿ ಅನ್ವಯ 10 ಸಾವಿರ ರೂಗಳ ದಂಡ ವಿಧಿಸುವುದಾಗಿ ಹೇಳಿದೆ.

ಪ್ಯಾನ್ ಮತ್ತು ಆಧಾರ್ ಜೋಡಣೆ ಪ್ರಕ್ರಿಯೆಗೆ ಮಾ 31 ರ ಅಂತಿಮ ಗಡುವು ನೀಡಿದ್ದು, ಒಂದೊಮ್ಮೆ ವಿಫಲವಾದಲ್ಲಿ ಏ 1 ರಿಂದ ಪ್ಯಾನ್‌ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಕೇಂದ್ರ ನೇರ ತೆರಿಗೆ ಇಲಾಖೆ (ಸಿಬಿಡಿಟಿ) ಹೇಳಿದೆ.
ಜೊತೆಗೆ ಪ್ಯಾನ್‌ಕಾರ್ಡ್ ಇಲ್ಲದಿರುವ ಅಥವಾ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಹೊಂದಿರುವವರು ಬ್ಯಾಂಕ್ ವ್ಯವಹಾರ, ಆಸ್ತಿ ವ್ಯವಹಾರ ಮತ್ತು ಷೇರು ವ್ಯವಹಾರಗಳಲ್ಲೂ ತೊಂದರೆ ಎದುರಿಸಬೇಕಿದೆ.

 

ಒಂದು ವೇಳೆ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೂ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದೊಡನೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ಪ್ಯಾನ್ ಮತ್ತು ಆಧಾರ್ ಜೋಡಣೆಗೆ ಎರಡು ಬಾರಿ ಅಂತಿಮ ಗಡುವನ್ನು ವಿಸ್ತರಿಸಿತ್ತು.
ಎಸ್‌ಎಂಎಸ್ ಮೂಲಕ ಆಧಾರ್ ಮತ್ತು ಪ್ಯಾನ್ ಜೋಡಣೆಗೆ ಆದಾಯ ತೆರಿಗೆ ಇಲಾಖೆ ಅವಕಾಶ ಕಲ್ಪಿಸಿದ್ದು 567678 ಅಥವಾ 56161ಗೆ ಯುಐಡಿಪಿಎಎನ್, ಪ್ಯಾನ್ ಸಂಖ್ಯೆ ,ಆಧಾರ್ ಸಂಖ್ಯೆ ಸಂದೇಶ ಕಳುಹಿಸುವ ಮೂಲಕ ಲಿಂಕ್ ಮಾಡಬಹುದಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here