ಕೊರೋನ  ನಿಯಂತ್ರಿಸಲು ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರತೆಗೆದುಕೊಳ್ಳುತ್ತಿದೆ. ಅದ್ರಲ್ಲಿ ಲಾಕ್ ಡೌನ್ ಮುಂದುವರಿಕೆ ಕೂಡ ಒಂದು. ಇನ್ನು ಮೇ 3 ರವರೆಗೆ ಲಾಕ್ ಡೌನ್ ಮುಂದುವರೆದಿದೆ. ಆದ್ರೆ ಕೊರೋನಾ ಹರಡುವಿಕೆಯೇನು ಕಂಟ್ರೋಲ್ ಗೆ ಸಿಕ್ಕಿಲ್ಲ. ಬದಲಿಗೆ ಹೆಚ್ಚಾಗ್ತಾನೆ ಇದೆ. ಈ ನಡುವೆ ಬೆಂಗಳೂರಿನಲ್ಲಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಲಾಕ್ ಡೌನ್ ಬಗ್ಗೆ ಮಾತನಾಡಿದ್ದಾರೆ.

ಏಪ್ರಿಲ್ 20 ರ ಬಳಿಕ ಲಾಕ್ ಡೌನ್ ಸಡಿಲಿಕೆಯಾಗಲಿದೆ. 20 ರ ನಂತರ ಐಟಿ ನೌಕರರ ಓಡಾಡಕ್ಕೆ ಯಾವುದೇ ರೀತಿಯ ಪಾಸ್ ಗಳ ಅಗತ್ಯವಿಲ್ಲ. ಶೇಕಡ 50 ಮಂದಿಯೊಂದಿಗೆ ಕೆಲಸ ನಿರ್ವಹಿಸಬೇಕಾಗಿದೆ. ಕಂಪನಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾತವಾಗಿರುತ್ತೆ. ಜೊತೆಗೆ ಐಟಿ ಕಂಪನಿ ಕೇಳಿದ್ರೆ ಬಿಎಂಟಿಸಿ ಬಸ್ ನೀಡಲಾಗುತ್ತೆ. ಸ್ಯಾನಿಟೈಸ್ ಮಾಡಿದ ಬಸ್ ಗಳನ್ನು ನೀಡಲಾಗುತ್ತೆ. ಕೊರೋನಾ ಕಂಟ್ರೋಲ್ ಗೆ ಲಾಕ್ ಡೌನ್ ಮಾಡಲಾಗಿದೆ. ಇನ್ನು ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ಕೆಲಸ ನಿರ್ವಹಿಸಬೇಕು ಎಂದಿದ್ದಾರೆ.

ಮತ್ತೊಂದೆಡೆ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ಏಪ್ರಿಲ್ 20 ರ ಬಳಿಕ ಲಾಕ್ ಡೌನ್ ಸಡಿಲ ಆಗಬಹುದು ಎಂಬ ಸಣ್ಣ ಸೂಚನೆಯನ್ನು ನೀಡಿದೆಯಾದರು ರಾಜ್ಯದಲ್ಲಿ ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತಲಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here