ಮರಣ ಹೊಂದಿದ ವ್ಯಕ್ತಿಯೊಬ್ಬರು ಫೋಟೋಗಳಲ್ಲಿ ಕಾಣಿಸಿಕೊಂಡರೆ ಸಾಮಾನ್ಯವಾಗಿ ಜನರು ಆತ್ಮಗಳು ಎಂದು ಹೇಳುತ್ತಾರೆ. ಆದರೆ ಇಂದು ತಂತ್ರಜ್ಞಾನದ ಮಹಿಮೆಯಿಂದಾಗಿ ನಮ್ಮನ್ನು ಅಗಲಿದವರನ್ನು ಕೂಡಾ ನಮ್ಮ ಜೊತೆಯಲ್ಲೇ ಇರುವಂತೆ ಫೋಟೋ‌ಶೂಟ್ ಮಾಡಬಹುದು ಎಂಬುದನ್ನು ಒಬ್ಬ ಛಾಯಾಗ್ರಾಹಕಿ ನಿಜ ಮಾಡಿ ತೋರಿಸಿ, ಸತ್ತ ಮಹಿಳೆಯ ಕೊನೆಯ ಆಸೆಯನ್ನು ನೆರವೇರಿಸಿದ್ದಾರೆ. ಈ ಅದ್ಭುತ ಘಟನೆ ಎಲ್ಲಿ ನಡೆದಿದೆ , ಹೇಗೆ ನಡೆದಿದೆ ಎಂಬುದರ ವಿವರ ಇಲ್ಲದೆ.‌ ಒಂದು ರೀತಿಯಲ್ಲಿ ಈ ಸುದ್ದಿ ಹಲವರಿಗೆ ಒಂದು ಸಂತಸದ ಸುದ್ದಿಯ ಜೊತೆಗೆ ಹೊಸ ಹೊಸ ಐಡಿಯಾಗಳಿಗೆ ಸ್ಪೂರ್ತಿ ಕೂಡಾ ಆಗಬಹುದು.

ಮಲೇಷ್ಯಾದಲ್ಲಿ ಆಡ್ಲಿನಗ್ ನೆಲ್ಡಾ ಎಂಬ ಮಹಿಳೆಯು ಗರ್ಭಿಣಿಯಾಗಿದ್ದರು. ಆಕೆ ನಾಲ್ಕನೇ ಮಗುವಿನ ತಾಯಿಯಾಗುತ್ತಿದ್ದು, ಮಗುವಿಗೆ ಜನ್ಮ ನೀಡಿದ ನಂತರ ತನ್ನ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಆಕೆ ಜಾರಾ ಹಲೀನಾ ಎಂಬ ಫೋಟೋಗ್ರಾಫರ್ ಬಳಿ ಮಾತನಾಡಿ, ಡಿಲೆವರಿ ನಂತರ ಫೋಟೋ ಶೂಟ್ ಮಾಡಿಸಲು ನಿರ್ಧಾರ ಮಾಡಿದ್ದಾರೆ. ಕುಟುಂಬ ಸದಸ್ಯರು ಹಾಗೂ ಜಾರಾ ಕೂಡಾ ಅವರ ಫೋಟೋ ಶೂಟ್ ಗಾಗಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅವರು ಅದಕ್ಕಾಗಿ ಕಾಯುತ್ತಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.

ಹೆರಿಗೆಯ ನಂತರ ಆಡ್ಲಿ ಸಾವನ್ನಪ್ಪಿದರು. ಆಕೆ ಜನ್ಮ ಕೊಟ್ಟ ಮಗು ಆರೋಗ್ಯವಾಗಿದೆ. ಫೋಟೋ ಶೂಟ್ ಕನಸು ನೋವಿನಲ್ಲಿ ಅಂತ್ಯವಾಗುವುದರಲ್ಲಿತ್ತು. ಆದರೆ ಜಾರಾ ಮಗು ಜನ್ಮಿಸಿದ ಐದು ತಿಂಗಳು ಮುಗಿಯುವ ಮೊದಲೇ ಫೋಟೋ ಶೂಟ್ ಕನಸನ್ನು ಜಾರಾ ನನಸು ಮಾಡಿದ್ದಾರೆ. ಆಕೆ ಫೋಟೋ ಶೂಟ್ ಆಯೋಜನೆ ಮಾಡಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಫೋಟೋ ಶೂಟ್ ನಲ್ಲಿ ಆಡ್ಲಿನಾ ಕೂಡಾ ಕುಟುಂಬದ ಜೊತೆ ಇರುವಂತೆ ಫೋಟೋಗಳನ್ನು ತೆಗೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಜಾರಾ ಅವರ ಈ ಹೊಸ ಪ್ರಯತ್ನಕ್ಕೆ ಛಾಯಾಗ್ರಾಹಕರು ಮಾತ್ರವಲ್ಲದೆ, ಫೋಟೋ ನೋಡಿದವರೆಲ್ಲಾ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here