ಟಿವಿ ನೋಡುವ ಪ್ರೇಕ್ಷಕರಿಗೆ ಅಬ್ಬರದ ಮನರಂಜನೆ ನೀಡಲು ನೂರಾರು ಚಾ‌ನೆಲ್ ಗಳು ಇವೆ. ಒಂದಕ್ಕಿಂತ ಮತ್ತೊಂದು ಸ್ಪರ್ಧೆಯಲ್ಲಿ ಬಿದ್ದಂತೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರ ಮುಂದೆ ಬಂದು, ಟಿಆರ್ಪಿ ಮೂಲಕ ಅಗ್ರ ಸ್ಥಾನವನ್ನು ಪಡೆಯಲು ಸದಾ ಸಜ್ಜಾಗಿರುತ್ತವೆ. ಈ ಚಾನೆಲ್ ಗಳ ಅಬ್ಬರದ ನಡುವೆ ಒಂದು ಕಾಲದಲ್ಲಿ ಅಬ್ಬರಿಸಿದ್ದ ದೇಶದ ರಾಷ್ಟ್ರೀಯ ವಾಹಿನಿ ಡಿಡಿ ನ್ಯಾಷನಲ್, ಅನಂತರ ನೂರಾರು ಚಾನೆಲ್ ಗಳ ಮಧ್ಯೆ ಮಾಯವಾಗಿತ್ತು. ಆದರೆ ಲಾಕ್ ಡೌನ್ ಎಫೆಕ್ಟ್ ಎಂಬಂತೆ ಈಗ ಮತ್ತೊಮ್ಮೆ ದೂರದರ್ಶನ ತನ್ನ ಗತ ವೈಭವವನ್ನು ಪಡೆದು ಈ ವರ್ಷದ ಹದಿಮೂರನೇ ವಾರದಲ್ಲಿ ದೂರದರ್ಶನ ಮನರಂಜನೆಯ ವಿಷಯದಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಕೊರೊನಾ ಸೋಂಕು ಹರಡುವು ಭೀತಿಯಲ್ಲಿ ಇಡೀ ದೇಶವನ್ನು 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಶಕಗಳ ಹಿಂದೆ ಜನರ ಮನಸ್ಸನ್ನು ಗೆದ್ದಿದ್ದ ಉತ್ತಮ ಮೌಲ್ಯ ಹಾಗೂ ಪೌರಾಣಿಕ ಮಹತ್ವ ಹೊಂದಿರುವ ರಾಮಾಯಣ, ಮಹಾಭಾರತದಂತಹ ಧಾರಾವಾಹಿಗಳನ್ನು ಮರುಪ್ರಸಾರ ಮಾಡಲು ಸೂಚನೆ ನೀಡಿತು. ಮನೆಯಲ್ಲಿ ಇದ್ದ ಜನಕ್ಕೆ ಈ ಕಾರ್ಯಕ್ರಮಗಳು ಭರ್ಜರಿ ಮನರಂಜನೆ ನೀಡಿದವು. ಹಿರಿಯರು ತಮ್ಮ ಆ ದಿನಗಳನ್ನು ಮೆಲುಕು ಹಾಕಿದರು. ಅದರ ನಡುವೆಯೇ ಚಾಣಾಕ್ಯ, ಶಕ್ತಿಮಾನ್ ನಂತಹ ಧಾರಾವಾಹಿಗಳು ಕೂಡಾ ಮತ್ತೊಮ್ಮೆ ಕಿರು ತೆರೆಯನ್ನು ಅಲಂಕರಿಸಿದವು.

ವಿವಿಧ ವಾಹಿನಿಗಳು ತಮ್ಮ ಧಾರಾವಾಹಿಗಳನ್ನೇ ಮೊದಲಿಂದ, ಈಗಾಗಲೇ ಫೇಮಸ್ ಆದ ಶೋ ಗಳನ್ನು ಮತ್ತೊಮ್ಮೆ ಹಾಕಿದರೆ, ದೂರದರ್ಶನ ದಶಕಗಳ ಹಿಂದೆ ದಾಖಲೆ ಸೃಷ್ಟಿಸಿದ ಧಾರಾವಾಹಿಗಳನ್ನು ಇಂದಿನವರ ಮುಂದೆ ಇಟ್ಟು ಹೊಸತನ ವನ್ನು ಪರಿಚಯಿಸಿತು. 13 ನೇ ವಾರದ (ಮಾರ್ಚ್ 28 ರಿಂದ ಏಪ್ರಿಲ್ 3, 2020) ಬಾರ್ಕ್ ಇಂಡಿಯಾ ವೀಕ್ಷಕರ ಮಾಹಿತಿಯ ಪ್ರಕಾರ, ದೂರದರ್ಶನವು ಹೆಚ್ಚು ವೀಕ್ಷಿಸಿದ ಚಾನೆಲ್ ಆಗಿ ಮಾರ್ಪಟ್ಟಿತು, ರಾಮಾಯಣ, ಮಹಾಭಾರತ ಮತ್ತು ಶಕ್ತಿಮಾನ್ ನಂತಹ ಕ್ಲಾಸಿಕ್‌ಗಳ ಮರಳುವಿಕೆಯು ಇತರೆ ಚಾನೆಲ್ ಗಳನ್ನು ಹಿಂದಿಕ್ಕಿತು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here