ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಮಂಗಳವಾರ ಪಾಕಿಸ್ತಾನ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ. ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 21 ನಿಮಿಷಗಳ ಕಾಲ ಯಶಸ್ವಿ ಕಾರ್ಯಚರಣೆ ನಡೆಸಿದ ಭಾರತೀಯ ವಾಯುಪಡೆ 200-300 ಉಗ್ರರನ್ನು ಖಲಾಸ್ ಮಾಡಿದೆ. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ‘ಏರ್ ಸ್ಟ್ರೈಕ್’ ನಡೆಸುವ ಮೂಲಕ ಬಾಂಬ್‌ಗಳ ಸುರಿಮಳೆಗರೆದ ಭಾರತೀಯ ಸೇನೆ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಲಾಂಚಿಂಗ್‌ ಪ್ಯಾಡ್‌ಗಳು ಛಿದ್ರ ಛಿದ್ರಗೊಳಿಸಿದೆ.

ಪೋಕ್ ಪ್ರವೇಶಿಸಿ ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ಮೇಲೆ ಹಾಕಿರುವ ಸೇನೆ ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ.1000 ಕೆ.ಜಿಗಳನ್ನು ಬಾಂಬ್‌ಗಳನ್ನು ಹೊತ್ತುಕೊಂಡ ಭಾರತೀಯ ವಾಯುಪಡೆಯ 12 ಮಿರಾಜ್ 2000 ಯುದ್ಧ ವಿಮಾನಗಳು ಜೈಷೆ, ಲಷ್ಕರ್ ಇ ತೋಯ್ಬಾ ಹಾಗೂ ಹಿಜ್ಬುಲ್ ಮುಜಾಹಿದೀನ್ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ 1971ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು (LoC) ಮೀರಿ ಭಾರತ ದಾಳಿಯನ್ನು ಮಾಡಿದೆ.

ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದ್ದರೂ ಭಾರತ ಎಂದು ಗಡಿ ನಿಯಂತ್ರಣ ರೇಖೆ ನಿಯಮವನ್ನು ಉಲ್ಲಂಘಿಸಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತಿನಂತೆ ಪುಲ್ವಾಮಾ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಗಡಿಯಲ್ಲಿ ಪಾಕ್ ಹದ್ದು ಕಣ್ಣನ್ನು ಮೀರಿಸಿರುವ ಭಾರತೀಯ ವಾಯುಪಡೆಯ ಸೇನೆಯು ಸುರಕ್ಷಿತವಾಗಿ ಮರಳಿದೆ. ಪರಿಣಾಮ 200ರಿಂದ 300ರಷ್ಟು ಉಗ್ರರು ಮಟಾಶ್ ಆದಿದ್ದಾರೆ ಎಂಬುದು ತಿಳಿದು ಬಂದಿದೆ.

ಪ್ರೇಮಿಗಳ ದಿನಾಚರಣೆಯಂದು ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮಗೊಂಡಿದ್ದರು. ಇದಕ್ಕೆ ಪ್ರತೀಕಾರ ತೀರಿಸುವ ಭರವಸೆ ನೀಡಿರುವ ಮೋದಿ, ಭಾರತೀಯ ಸೇನೆಗೆ ಫ್ರೀ ಹ್ಯಾಂಡ್ ನೀಡಿದ್ದರು. ಇದರಂತೆ ರಣತಂತ್ರವನ್ನು ರೂಪಿಸಿರುವ ಭಾರತೀಯ ವಾಯುಪಡೆಯು ಉಗ್ರರ ನೆಲೆಗಳಾದ ಬಾಲಕೋಟ್, ಚಕೋಟಿ ಹಾಗೂ ಮುಜಾಫರ್‌ಬಾದ್‌ ಪ್ರದೇಶಗಳನ್ನು ನೆಲಸಮಗೊಳಿಸಿದೆ.ನಿಮ್ಮ ಮಾಹಿತಿಗಾಗಿ, 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಸರ್ಜಿಕಲ್ ಸ್ಟೈಕ್ ನಡೆಸಿತ್ತು.

ಇನ್ನು 1999 ಕಾರ್ಗಿಲ್ ಯುದ್ಧದ ಸಂಭ್ರಮದಲ್ಲೂ ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿರಲಿಲ್ಲ. ಆದರೆ ಇದೀಗ 48 ವರ್ಷಗಳ ಬಳಿಕ ಪಾಕ್‌ಗೆ ತಕ್ಕ ಪಾಠವನ್ನೇ ಕಲಿಸಿದೆ. ದಾಳಿಯ ಬಳಿಕ  ಸದ್ಯ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here