ಸಂತಸ ಅರಳುವ ಸಮಯ,ಮರೆಯೋಣ ಚಿಂತೆಯಾ ಇದು ರಮ್ಯ ಚೈತ್ರ ಕಾಲ… ಈ ಮಧುರವಾದ ಹಾಡನ್ನು ಎಂದಿಗೂ ಮರೆಯಲಾಗುವುದಿಲ್ಲ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿನಯದ ಏಳು ಸುತ್ತಿನ ಕೋಟೆ ಸಿನಿಮಾದ ಈ ಹಾಡಿನಲ್ಲಿ ರೆಬೆಲ್ ಸ್ಟಾರ್ ಮತ್ತು ದಕ್ಷಿಣ ಸಿನಿಮಾಗಳ ಖ್ಯಾತ ನಟಿ ಗೌತಮಿ ಅಭಿನಯಿಸಿದ್ದರು. ಹೌದು ಗೌತಮಿ ಚಿತ್ರರಂಗ ಕಂಡ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ದಕ್ಷಿಣದ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ ನಟಿ ಗೌತಮಿ ಅವರ ಜೀವನ ಮಾತ್ರ ಸಿನಿಮಾಗಳಷ್ಟು ವರ್ಣರಂಜಿತವಾಗಲಿಲ್ಲ. ಆದರೂ ಎಲ್ಲವನ್ನು ಎದುರಿಸಿ ಗೌತಮಿ ಈಗ ಮತ್ತೊಮ್ಮೆ ಸಿನಿಮಾ ರಂಗಕ್ಕೆ ಮರಳಿ ಬಂದು ಅಭಿಮಾನಿಗಳ ಮನ ಸೂರೆಗೊಂಡಿದ್ದಾರೆ.

ಮೂಲತಃ ಆಂಧ್ರದ ವಿಶಾಖಪಟ್ಟಣಂ ನವರಾದ ಗೌತಮಿ ಅವರು ತೆಲುಗಿನ ದಯಾಮಯುಡು ಅನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟವರು. ನಂತರ ಗುರುಶಿಷ್ಯನ್ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದರು. ಹಾಗೆ ಆರಂಭವಾದ ಚಿತ್ರ ಜೀವನದಲ್ಲಿ ಅವರು ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ನಟಿಸಿ ಹೆಸರಾದರು. 1998 ಜೂನ್ 4 ರಂದು ಚೆನ್ನೈನ ತಾಜ್ ಕೋರಮಂಡಲ್ ಹೊಟೇಲ್ ನಲ್ಲಿ ಸಂದೀಪ್ ಭಾಟಿಯಾ ಅವರೊಡನೆ ವಿವಾಹ ಜೀವನಕ್ಕೆ ಅಡಿಯಿಟ್ಟರು. ಆದರೆ ಕಾರಣಾಂತರಗಳಿಂದ ಗಂಡನಿಂದ ಬೇರೆಯಾದರು. ಅದು ಸಾಲದೆಂಬಂತೆ ಗೌತಮಿ ಅವರು ಸ್ತನ ಕ್ಯಾನ್ಸರ್ ನಿಂದ ನರಳಬೇಕಾಯಿತು.

ಗಂಡನಿಂದ ಬೇರೆಯಾದ ಮೇಲೆ ಗೌತಮಿ ಅವರು ಸುಮಾರು ಹದಿಮೂರು ವರ್ಷಗಳ ಕಾಲ ಕಮಲ್ ಹಾಸನ್ ಅವರೊಂದಿಗೆ ರಿಲೇಷನ್ ಶಿಪ್ ನಲ್ಲಿ ಇದ್ದ ಗೌತಮಿ, ಅವರಿಗೆ ಕಮಲ ಹಾಸನ್ ಜೊತೆಯಾಗಿ ನಿಂತರು‌. ಸ್ತನ ಕ್ಯಾನ್ಸರ್ ಅನ್ನು ಸಮರ್ಥವಾಗಿ ಎದುರಿಸಿದ ಗೌತಮಿ ಭೀಕರ ಕಾಯಿಲೆಯಿಂದ ಗುಣಮುಖರಾದರು. ಆದರೆ ತಮ್ಮ ಮಕ್ಕಳ ಜವಾಬ್ದಾರಿಯ ಹೊಣೆಯಿಂದ ಕಮಲ ಹಾಸನ್ 2016 ರಲ್ಲಿ ಗೌತಮಿ ಅವರಿಂದ ಬೇರೆಯಾದರು. ಗೌತಮಿ ಅವರು ಕೂಡಾ 19 ವರ್ಷಗಳ ನಂತರ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಈಗಾಗಲೇ ತೆಲುಗು ಹಾಗೂ ಮಲೆಯಾಳಂ ನಲ್ಲಿ ತೆರೆ ಮೇಲೆ ಕಂಡಿರುವ ಅವರು ತಮಿಳಿನಲ್ಲಿ ಕೂಡಾ ಮರಳುತ್ತಿದ್ದಾರೆ.

ಗೌತಮಿ ಅವರು ಕನ್ನಡದಲ್ಲಿ ಏಳು ಸುತ್ತಿನ ಕೋಟೆ, ಸಾಹಸ ವೀರ , ಚಿಕ್ಕೆಜಮಾನ್ರು ಮತ್ತು ಚೆಲುವ ಚಿತ್ರಗಳಲ್ಲಿ ನಟಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here