ಇನ್ನು ಮುಂದೆ ಸಂಜೆ 6 ಗಂಟೆಗೆ ಮದ್ಯದ ಅಂಗಡಿಗಳನ್ನು ಮುಚ್ಚಬೇಕೆಂಬ ಹೊಸ ನಿರ್ಧಾರವನ್ನು ಮಾಡಿದೆ ನೆರೆಯ ಆಂಧ್ರ ಪ್ರದೇಶದ ಸರ್ಕಾರ. ಸಾಮಾನ್ಯವಾಗಿ ರಾತ್ರಿ 10 ಗಂಟೆಗೆ ಮದ್ಯದಂಗಡಿಗಳನ್ನು ಮುಚ್ಚಬೇಕಾಗಿತ್ತು. ಆದರೆ ಅದನ್ನು ಬದಲಿಸಿ ಈಗ ಸಂಜೆ ಆರು ಗಂಟೆಗೆ ಅಂಗಡಿಗಳನ್ನು ಮುಚ್ಚಲು ತೀರ್ಮಾನ ಮಾಡಲಾಗಿದೆ. ಮದ್ಯ ವ್ಯಸನಿಗಳಾದವರು ಸಂಜೆಯ ಆರರ ವೇಳೆಗೆ ಅಮಲಿನಲ್ಲಿ ಮೈ ಮರೆಯುತ್ತಿದ್ದು, ವ್ಯಾಪಾರ ವಹಿವಾಟುಗಳು ಗಣನೀಯವಾಗಿ ಇಳಿಮುಖವಾಗುತ್ತಿದೆಯೆಂದು ಅದನ್ನು ತಡೆಯಲು ಸರ್ಕಾರ ಇಂತಹುದೊಂದು ಆಲೋಚನೆಗೆ ಕೈ ಹಾಕಿದೆ.

ಮದ್ಯ ವ್ಯಸನಿಗಳು ಸಂಜೆಯಾಗುತ್ತಿದ್ದಂತಾ ಬಾರ್ ಅಥವಾ ವೈನ್ ಅಂಗಡಿಗಳಿಗೆ ತೆರಳಿ ಅಲ್ಲೇ ಕುಡಿಯುತ್ತಾ ತಮ್ಮ ಹೆಚ್ಚಿನ ಸಮಯವನ್ನು ವ್ಯರ್ಥವಾಗಿ ವ್ಯಯಿಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಕಾರಣ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅದನ್ನು ತಡೆಯುವುದಕ್ಕಾಗಿ ಸರ್ಕಾರವು ಮದ್ಯದಂಗಡಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ಕೂಡಾ ಚಿಂತಿಸಿದೆ ಎನ್ನಲಾಗಿದೆ. ಸರ್ಕಾರವು ಈಗ ಮೊದಲ ಹಂತ ಎಂಬಂತೆ ಮದ್ಯದ ಅಂಗಡಿಗಳನ್ನು ಬೇಗ ಮುಚ್ಚುವ ಕಾರ್ಯವನ್ನು ಮಾಡಲು ಮುಂದಾಗಿದೆ.

ಸಿಎಂ‌ ಜಗನ್ನಾಥ ರೆಡ್ಡಿಯವರು ಚುನಾವಣೆಗೆ ಮೊದಲು ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯಪಾನ ನಿಷೇಧ ಮಾಡುವುದಾಗಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲವಾದರೂ ಈಗ ಮದ್ಯದ ಅಂಗಡಿಗಳನ್ನು ಬೇಗ ಮುಚ್ಚುವ ನಿರ್ಧಾರವನ್ನು ಮಾಡಿದ್ದಾರೆ. ಇದರಿಂದಾಗಿ ಇನ್ನು ಮುಂದೆ ಆಂದ್ರಪ್ರದೇಶದಲ್ಲಿ ಸಂಜೆ ಆರರ ನಂತರ ಮದ್ಯ ವ್ಯಸನಿಗಳಿಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕುವಂತಾಗಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here