ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿನಿಮಾಗಳು ಮಾತ್ರವಲ್ಲದೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸುದ್ದಿಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಮತ್ತೊಂದು ಜನಪರ ಕಾರ್ಯಕ್ಕೆ ಪುನೀತ್ ಮುಂದಾಗಿದ್ದಾರೆ. ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಹೊಸ ಜವಬ್ದಾರಿಯೊಂದನ್ನು ಹೊತ್ತುಕೊಂಡಿದ್ದಾರೆ. ವಿಶೇಷವೆಂದ್ರೆ ಈ ಹೊಸ ಜವಬ್ದಾರಿಗೆ ಅಪ್ಪು ಒಂದೇ ಒಂದು ರೂಪಾಯಿ ಹಣ ಕೂಡ ಪಡೆಯುತ್ತಿಲ್ಲ. ಈ ಮೂಲಕ ಅಪ್ಪು ತಮ್ಮ ದೊಡ್ಡಗುಣ ಮೆರೆದಿದ್ದಾರೆ.  ಹೌದು ಬಿಎಂಟಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಪುನೀತ್ ರಾಜ್​ಕುಮಾರ್ ಆಯ್ಕೆಯಾಗಿದ್ದಾರೆ.

ತಾವು ಬ್ರ್ಯಾಂಡ್​ ಅಂಬಾಸಿಡರ್ ಆಗಲು ಪುನೀತ್ ಒಪ್ಪಿಗೆ ನೀಡಿದ್ದಾರೆ. ಅಲ್ಲದೆ, ಯಾವ್ದೇ ಹಣ ಪಡೆಯದೆ ನೂತನ ಬಸ್​ ಲೈನ್ ಬಗ್ಗೆ ಜಾಗೃತಿ ಮೂಡಿಸಲು ಅಪ್ಪು ಮುಂದಾಗಿದ್ದಾರೆ. ನೂತನ ಬ್ರ್ಯಾಂಡ್ ಅಂಬಾಸಿಡರ್ ಪುನೀತ್​​ ಅವರಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಧನ್ಯವಾದ ಸಲ್ಲಿಸಿದ್ದಾರೆ.ಜನರಲ್ಲಿ ಜಾಗೃತಿ ‌ಮೂಡಿಸುವುದು ಕರ್ತವ್ಯ ಅಂತಾ ಪುನೀತ್‌ ರಾಜ್‌ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಪುನೀತ್‌ ರಾಜ್‌ಕುಮಾರ್‌ ಬಿಎಂಟಿಸಿಯ ನೂತನ ಬ್ರ್ಯಾಂಡ್‌ ಅಂಬಾಸಿಡರ್‌ ಆಗೋದು ಕನ್ಫರ್ಮ್‌ ಆಗಿದೆ. ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ, ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಅನುಪಮ್‌ ಅಗರ್‌ವಾಲ್‌ ಪುನೀತ್‌ರನ್ನ ಭೇಟಿ ಮಾಡಿ ಅಪ್ರೋಚ್ ಮಾಡಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here