ಕನ್ನಡ ಕಿರುತೆರೆಯ ನಟಿಯರಿಗೆ ವಿವಾಹದ ಸಂಭ್ರಮ ಎನ್ನುವಂತೆ ಕಳೆದ ಕೆಲವು ದಿನಗಳಿಂದ ಕಿರು ತೆರೆಯ ನಟಿಯರು ವಿವಾಹಗಳು ಒಂದಾದ ನಂತರ ಒಂದರಂತೆ ನಡೆಯುತ್ತಿವೆ‌. ಕನ್ನಡದ ಸುಪ್ರಸಿದ್ಧ ಧಾರಾವಾಹಿ ಅಗ್ನಿ ಸಾಕ್ಷಿಯಲ್ಲಿ ನಟಿಸಿದ್ದ ಇಶಿತಾ ವರ್ಷ ಅವರು ತಮ್ಮ ಗೆಳೆಯ ಮುರುಗಾನಂದ್ ಅವರೊಡನೆ ವಿವಾಹ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಇಶಿತಾ ವರ್ಷ ನಟಿಯ ನಿಜವಾದ ಹೆಸರಾದರೂ, ಜನರಿಗೆ ಬೇಗ ತಿಳಿಯುವುದು ಮಾತ್ರ ಅಗ್ನಿ ಸಾಕ್ಷಿ ಧಾರಾವಾಹಿಯ ಮಾಯ ಎಂದರೆ‌. ಏಕೆಂದರೆ ಇಶಿತಾವರ್ಷ ಅವರು ಧಾರಾವಾಹಿಯ ತಮ್ಮ ಪಾತ್ರದ ಹೆಸರಿನಿಂದಲೇ ಸಾಕಷ್ಟು ಜನರಿಗೆ ಪರಿಚಯ‌.

ಮಾಯಾ ಎಂದೇ ಜನಪ್ರಿಯರಾಗಿರುವ ಇಶಿತವರ್ಷ ಅವರು ಕೈ ಹಿಡಿದಿರುವ ತಮ್ಮ ಬಹು ಕಾಲದ ಗೆಳೆಯ ಮುರುಗಾನಂದ ಅವರು ಕೊರಿಯೋಗ್ರಾಫ್ ಕೂಡಾ ಹೌದು‌. ಮುರುಗಾನಂದ್ ಸಿನಿಮಾಗಳು ಹಾಗೂ ರಿಯಾಲಿಟಿ ಶೋ ಗಳಲ್ಲಿ ಕೂಡಾ ಕೊರಿಯೋಗ್ರಫರ್ ಆಗಿ ತಮ್ಮ ವೃತ್ತಿ ನಡೆಸುತ್ತಿದ್ದಾರೆ. ಮದುವೆ ಸಮಾರಂಭ ಬಹಳ ಅದ್ದೂರಿಯಾಗಿ ನಡೆದಿದ್ದು, ವಿವಾಹಕ್ಕೆ ಅವರ ಕುಟುಂಬ ವರ್ಗದವರು, ಸ್ನೇಹಿತರು ಮತ್ತು ಕಿರುತೆರೆ ಕಲಾವಿದರು ಆಗಮಿಸಿ ಜೋಡಿಯನ್ನು ಹರಸಿದ್ದಾರೆ.

ಇಶಿತಾ ಅವರು ಕಿರುತೆರೆ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಆದರೆ ಅವರಿಗೆ ಹೆಸರು ಬಂದಿದ್ದು ಅಗ್ನಿ ಸಾಕ್ಷಿ ಧಾರಾವಾಹಿಯ ಮೂಲಕ. ಈ ಧಾರಾವಾಹಿಯಲ್ಲಿ ಇಶಿತಾ ವಿಲನ್ ಪಾತ್ರಧಾರಿಯಾದ ಚಂದ್ರಿಕಾ ಅವರ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೈವಾಹಿಕ ಜೀವನಕ್ಕೆ ಅಡಿಯಿಟ್ಟಿರುವ ಈ ನಟಿಯ ಜೀವನದಲ್ಲಿ ಸಂಭ್ರಮ ಸದಾ ಕಾಲ ಹಸಿರಾಗಿರಲಿ ಎಂದು ಹಾರೈಸೋಣ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here