ಕಿರುತೆರೆ ನಟ ಅಗ್ನಿ ಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಉರುಫ್ ನಟ ವಿಜಯ್ ಸೂರ್ಯ ಅವರು ಇನ್ನು ಮುಂದೆ ಧಾರಾವಾಹಿಯಲ್ಲಿ ಇರುವುದಿಲ್ಲ ಎಂದು ಶಾಕಿಂಗ್ ನ್ಯೂಸ್ ಒಂದನ್ನು ಧಾರಾವಾಹಿ ಹಾಗೂ ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ವಿಷಯವನ್ನು ಸ್ವತಃ ನಟ ವಿಜಯ್ ಸೂರ್ಯ ಅವರೇ ಬಹಿರಂಗ ಮಾಡಿದ್ದು, ಇದರಿಂದ ವಿಶೇಷವಾಗಿ ಅವರ ಮಹಿಳಾ ಅಭಿಮಾನಿಗಳಿಗೆ ಈ ವಿಷಯ ಬೇಸರವನ್ನು ಮೂಡಿಸಿದೆ. ಕೆಲವರಂತೂ ಸಿದ್ಧಾರ್ಥ್ ಇಲ್ಲದ ಮೇಲೆ ಧಾರಾವಾಹಿ ಯಾಕೆ ನೋಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕೋ ಮೂಲಕ ನಟನ ನಿರ್ಧಾರದ ಬಗ್ಗ ಅಸಮಾಧಾನ ತೋರಿದ್ದಾರೆ.

ಧಾರಾವಾಹಿ ಈಗ ಒಂದು ಹಂತಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಸಿದ್ಧಾರ್ಥ್ ಹೊರ ನಡೆಯುವುದು ಹಲವರಿಗೆ ಬೇಸರ ತರಿಸಿದೆ. ಇನ್ನು ಸಿದ್ಧಾರ್ಥ್ ಅವರು ಹೊರ ಬರಲು ಕಾರಣ ಧಾರಾವಾಹಿಯಲ್ಲಿ ಅವರ ಪಾತ್ರ ಕೊನೆಯಾಗಲಿದ್ದು, ಅವರು ಆಸ್ಟ್ರೇಲಿಯಾ ಗೆ ಹೋಗಲು ಸಿದ್ಧತೆ ನಡೆಸುವ ರೀತಿ ಧಾರಾವಾಹಿ ಮೂಡಿ ಬಂದಿದೆ. ಹೀಗೆ ಪಾತ್ರವು ಆಸ್ಟ್ರೇಲಿಯಾ ಕ್ಕೆ ಹೋದ ಮೇಲೆ ಅವರ ಪಾತ್ರ ಮುಗಿಯುತ್ತಂತೆ. ಅದೂ ಅಲ್ಲದೆ ನಟ ವಿಜಯ್ ಸೂರ್ಯ ಅವರ ಧಾರಾವಾಹಿಯ ತಂಡದ ಜೊತೆ ಮಾಡಿಕೊಂಡಿದ್ದ ಐದು ವರ್ಷದ ಅಗ್ರಿಮೆಂಟ್ ಕೂಡಾ ಮುಗಿದಿದೆಯಂತೆ.

ಹೀಗಾಗಿ ಈ ಎಲ್ಲಾ ಕಾರಣಗಳಿಂದ ವಿಜಯ್ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು, ಇದೇ ಸರಿಯಾದ ಸಮಯ ಎನ್ನುತ್ತಾರೆ. ಅಲ್ಲದೆ ಇತ್ತೀಚಿಗಷ್ಟೆ ಅವರಿಗೆ ಮದುವೆ ಕೂಡಾ ಆಗಿದ್ದು, ಕುಟುಂಬಕ್ಕೂ ಕೂಡಾ ಸಮಯ ಮೀಸಲಿಡಲು ನಿರ್ಧರಿಸಿದ್ದಾರೆ. ಇನ್ನೂ ಆಸಕ್ತಿಕರ ಸಂಗತಿ ಎಂದರೆ ವಿಜಯ್ ಸೂರ್ಯ ಬೆಳ್ಳಿ ತೆರೆಯ ಮೇಲೆ ಕೂಡಾ ಮಿಂಚಲಿದ್ದಾರೆ. ಸದ್ಯಕ್ಕೆ ಅವರು ಲಕ್ನೋ ಟು ಮುಂಬೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸೀರಿಯಲ್ ಬಿಡುವ ನಿರ್ಧಾರವಂತೂ ಈಗ ಅಭಿಮಾನಿಗಳಿಗೆ ಬೇಸರ ತಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here