ರಾಜ್ಯದಲ್ಲಿ ಮತ್ತೆ ಮುಂಗಾರು ಆರಂಭವಾಗಿದೆ‌.ಚಿಕ್ಕಮಗಳೂರು ಮತ್ತು ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಮತ್ತೆ ಆರ್ಭಟಿಸುತ್ತಿದೆ.ಮಲೆನಾಡು ಮತ್ತು ಕರಾವಳಿ ಭಾಗದ ನದಿಗಳು ಬಹುತೇಕ ತುಂಬಿ ಹರಿಯುತ್ತಿದ್ದು ಸೇತುವೆಗಳು ಮುಳುಗಡೆ ಆಗುತ್ತಿವೆ.ಶೃಂಗೇರಿ ,ಕಳಸ ,ಹೊರನಾಡು ,ಉಡುಪಿ ,ಮಂಗಳೂರು ಸೇರಿದಂತೆ ಹಲವೆಡೆ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ.ಬಿಡದೇ ಸುರಿಯುತ್ತಿರುವುದರಿಂದ ಕರಾವಳಿ ಭಾಗದ ಜನರಿಗೆ ಸಮುದ್ರಕ್ಕೆ ಮೀನುಗಾರಿಕೆ ಗೆ ಇಳಿಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಇನ್ನು ಶಿವಮೊಗ್ಗದ ಆಗುಂಬೆ ಕಾಡಿನಲ್ಲಿ ಸಹ ಮಳೆ ತೀವ್ರತೆ ಹೆಚ್ಚಾಗಿ ಆಗುಂಬೆಯ ಘಾಟಿನ ರಸ್ತೆ ಎಂಟನೇ ತಿರುವು ಕುಸಿದಿದೆ.ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ಧಾವಿಸಿ ವಾಹನ ಸವಾರರಿಗೆ ತೊಂದರೆ ಆಗದಂತೆ ಜಾಗೃತಿ ವಹಿಸಿದ್ದಾರೆ.ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಕೊಡಗು ,ಕರಾವಳಿ ಮತ್ತು ಪಶ್ಚಿಮ ಘಟ್ಟದಲ್ಲಿ ಅಬ್ಬರಿಸಿದ್ದ ವರುಣನ ಆರ್ಭಟಕ್ಕೆ ಚಾರ್ಮಾಡಿ ಘಟ್ಟದಲ್ಲಿ ಗುಡ್ಡ ಕುಸಿದು ಎರಡು ದಿನ ಸಂಚಾರ ಸ್ಥಗಿತವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಇದೀಗ ಆಗುಂಬೆ ಘಟ್ಟದಲ್ಲಿ ಸಹ ರಸ್ತೆಯ ತಿರುವಿನಲ್ಲಿ ರಸ್ತೆ ಕುಸಿದಿದ್ದು ಸದ್ಯ ಯಾವುದೇ ತೊಂದರೆ ಸಂಭವಿಸಿಲ್ಲ.ಮತ್ತು ರಸ್ತೆ ಸಂಚಾರಕ್ಕೆ ಸಹ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ. ಆಗುಂಬೆ ರಸ್ತೆ ತಿರುವು ಕುಸಿದ ಸ್ಥಳದ ವೀಡಿಯೋ ಇಲ್ಲಿದೆ ನೋಡಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here