ಶೈಕ್ಷಣಿಕ ಅರ್ಹತೆ

ಉದ್ಯೋಗದ ಸ್ಥಳ ಮಹಾರಾಷ್ಟ್ರ. ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿರಬೇಕು, ಇಂಗ್ಲಿಷ್ ಮತ್ತು ಹಿಂದಿ ಜೊತೆಗೆ ಸ್ಥಳೀಯ ಭಾಷೆ ತಿಳಿದಿರಬೇಕು. ಹ್ಯಾಂಡಿಮ್ಯಾನ್-971 ಮತ್ತು ಯುಟಿಲಿಟಿ ಏಜೆಂಟ್-27 ಹುದ್ದೆಗಳು ಖಾಲಿ ಇವೆ.

ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 31 ವರ್ಷ, ಎಸ್.ಸಿ./ಎಸ್.ಟಿ. ಅಭ್ಯರ್ಥಿಗಳಿಗೆ 33 ವರ್ಷ. ಸಾಮಾನ್ಯ, ಒ.ಬಿ.ಸಿ. ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್.ಸಿ./ಎಸ್.ಟಿ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

ಆಯ್ಕೆ ವಿಧಾನ

ದೈಹಿಕ ಪರೀಕ್ಷೆ, ನೇರ ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುತ್ತದೆ. ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳ ಪ್ರತಿಯನ್ನು ಇರಿಸಿ ಕಳುಹಿಸಬೇಕು. ಅರ್ಜಿ ನಮೂನೆ ಡೌನ್ ಲೋಡ್ ಮಾಡಬೇಕಾದ ವೆಬ್ ಸೈಟ್ http://www.aiasl.in/

ಅರ್ಜಿ ಸಲ್ಲಿಸಬೇಕಾದ ವಿಳಾಸ:

HRD Department, AI Airport Services Limited, GSD Complex, Near Sahar Police Station, CSMI Airport, Terminal-2, Gate No. 5, Sahar, Andheri-East, Mumbai-400099.