ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದ್ದು, 191 ಜನ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಇಬ್ಭಾಗವಾಗಿದೆ.ಕೇರಳದ ಕೋಯಿಕ್ಕೋಡ್ ನ ಕರಿಪುರ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 191 ಜನ ಪ್ರಯಾಣಿಕರು ಇದ್ದರು.

 

ಇದರಲ್ಲಿ 20 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.ಲ್ಯಾಂಡ್ ಆಗುವ ವೇಳೆ ವಿಮಾನ ರನ್ ವೇಗೆ ಅಪ್ಪಳಿಸಿದೆ. ವಿಮಾನ ತುಂಡು ತುಂಡಾಗಿದ್ದು, ಹಲವು ಭಾಗಗಳಾಗಿದೆ. ಸಂಜೆ 7.40ರ ಹೊತ್ತಿಗೆ ಘಟನೆ ಸಂಭವಿಸಿದ್ದು, ಭಾರೀ ಮಳೆ ಬರುತ್ತಿರುವಾಗಲೇ ಈ ಅವಘಡ ಸಂಭವಿಸಿದೆ.

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here