ಸ್ಟಾರ್ ನಟರ ಮಕ್ಕಳು ಕೂಡಾ ಹುಟ್ಟುತ್ತಲೇ ಸ್ಟಾರ್ ಕಿಡ್ಸ್ ಆಗಿ ಬಿಡುತ್ತಾರೆ. ತಮ್ಮ ಅಭಿಮಾನ ಸ್ಟಾರ್ ನಟ ಮಗ ಅಥವಾ ಮಗಳ ಬಗ್ಗೆ ತಿಳಿಯುವ ಕುತೂಹಲ ಅವರ ಅಭಿಮಾನಿಗಳಲ್ಲಿ ಕೂಡಾ ಹೆಚ್ಚಾಗಿಯೇ ಇರುತ್ತದೆ. ಸ್ಟಾರ್ ನಟನ ಮನೆಯಲ್ಲಿರುವ ಮುದ್ದು ಮಕ್ಕಳ ಆಟ ಪಾಠ ಎಲ್ಲವನ್ನೂ ನೋಡಲು ಬಯಸುತ್ತಾರೆ ಅವರ ಅಭಿಮಾನಿಗಳು. ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಅವರ ಮಗಳು ಐರಾ ಯಶ್ ಕೂಡಾ ಹುಟ್ಟುತ್ತಲೇ ಸ್ಟಾರ್ ಬೇಬಿ ಎಂಬ ಹೆಸರನ್ನು ಪಡೆದು ಸದಾ ಸುದ್ದಿಯಲ್ಲಿರುವುದು ಕೂಡಾ ವಿಶೇಷ. ಐರಾ ಬೇಬಿಯ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕಂಡರೂ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತದೆ.

ನಟ ಯಶ್ ಅವರ ಪತ್ನಿ, ಸ್ಯಾಂಡಲ್ ವುಡ್ ನ ಸಿಂಡ್ರಲಾ ಎಂದೇ ಹಸರಾಗಿರುವ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಪುಟ್ಟ ಮಗಳ ವಿಡಿಯೋಗಳು, ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಸಂತೋಷ ಹಾಗೂ ಸಂಭ್ರಮದ ಕ್ಷಣಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ರಾಧಿಕಾ ಅವರು ಅಂತುಹುದೇ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು,, ಯಶ್ ಹಾಗೂ ರಾಧಿಕಾ ಅವರ ಮಗಳ ಆ ಕೆಲವೇ ಸೆಕೆಂಡ್ ಗಳ ವಿಡಿಯೋದಲ್ಲಿ ಐರಾ ನೀಡಿರುವ ಎಕ್ಸ್ ಪ್ರೆಷನ್ ಎಲ್ಲರ ಗಮನವನ್ನು ಸೆಳೆದಿದೆ.

ವಿಡಿಯೋದಲ್ಲಿ ಪುಟಾಣಿ ಕಂದನನ್ನು ಬಿಸಿಲಿಲ್ಲಿ ಹೇಗೆ ನೋಡೋದು? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಐರಾ ಬೇಬಿ ಬಿಸಿಲು ಹೆಚ್ಚಾದಾಗ ಮುಖ ಭಾವ ಯಾವ ರೀತಿ ಇರುತ್ತೆ ಅಂತ ತೋರಿಸಿರುವುದು ಬಹಳ ಮುದ್ದಾಗಿ ಕಂಡಿದೆ. ಆ ಪುಟ್ಟ ಮಗುವಿನ ಆ ಕ್ಯೂಟ್ ಎಕ್ಸಪ್ರೆಷನ್ ನೋಡಿ ಅಭಿಮಾನಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಪುಟಾಣಿ ಮಕ್ಕಳು ಇಂತಹ ತುಂಟಾಟಗಳು ಬಹಳ ಮನಸ್ಸನ್ನು ಗೆಲ್ಲುತ್ತವೆ. ಅದರಂತೆ ಐರಾ ಬೇಬಿಯ ಈ ವಿಡಿಯೋ ಕೂಡಾ ವೈರಲ್ ಆಗುತ್ತಿದೆ.

When Ayra shows u "bislali henge nododu" (How to see when it's too sunny) 😁VC: Manish Photography, thank you Manish for capturing this moment!!

Radhika Pandit यांनी वर पोस्ट केले गुरुवार, २८ नोव्हेंबर, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here