ರಾಜಕೀಯ ನಾಯಕರು ಅದರಲ್ಲೂ ಪ್ರತಿಪಕ್ಷಗಳ ನಾಯಕರು ಸಭೆಗಳಲ್ಲಿ, ಸಮಾವೇಶಗಳಲ್ಲಿ ಒಬ್ಬರ ಮೇಲೊಬ್ಬರು ಟೀಕೆಗಳು ಮಾಡಿಕೊಂಡು, ಬೈಗುಳಗಳ ಮಾರಾಮಾರಿ ನಡೆಸಿ, ಮಾದ್ಯಮಗಳಲ್ಲಿ ಅದು ದೊಡ್ಡ ಸುದ್ದಿಯಾಗುತ್ತದೆ. ಅವರು ಮಾತನಾಡುವ ಪರಿಯನ್ನು ನೋಡಿದಾಗ ಇವರು ಎದುರೆದುರು ಬಂದಾಗ ಎಂತಹ ಪರಿಸ್ಥಿತಿ ನಿರ್ಮಾಣವಾಗುವುದೊ ಎಂಬೊಂದು ಅನುಮಾನ ಕೂಡಾ ನಮಗೆ ಬರುತ್ತದೆ. ಈಗ ಅಂತಹ ಒಂದು ಉದಾಹರಣೆ ಕೊಡಬಹುದಾದಂತಹ ಸಂಘಟನೆ ನಡೆದಿದ್ದು, ಇಬ್ಬರು ಪ್ರತಿಪಕ್ಷಗಳ ನಾಯಕರು ಎದುರಾದಾಗ ಅವರ ಮಧ್ಯೆ ಹೇಗಿತ್ತು ಸಂದರ್ಭ ಎನ್ನುವುದನ್ನು ನಾವು ನೋಡಬಹುದು.

ಕುಂದಗೋಳ ಉಪಚುನಾವಣೆಯ ಪ್ರಚಾರ ಬಹಳ ಭರ್ತರಿಯಾಗಿ, ಬಿರುಸಿನಿಂದ ನಡೆಯುತ್ತಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್, ಬಿಜೆಪಿ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಕ್ಯಾಂಪೇನ್ ನಡೆಸಿ, ನಂತರ ಇಂದು ಪ್ರಚಾರ ಮುಗಿಸಿಕೊಂಡು ಬೆಂಗಳೂರಿಗೆ ಹೊರಟಂತಹ ಸಂದರ್ಭದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ಇಬ್ಬರೂ ಮುಖಾ ಮುಖಿಯಾಗುವ ಸಂದರ್ಭ ಬಂದಿದೆ.

ಪರಸ್ಪರ ಎದುರಾದ ಕೂಡಲೇ ಸಚಿವ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು ಜೊತೆ ಆರಾಮಾಗಿ ಮಾತಕತೆ ನಡೆಸಿದ್ದಾರೆ.‌ ಇಬ್ಬರೂ ಸುಮಾರು 30 ನಿಮಿಷಗಳ ಕಾಲ ಹಲವು ವಿಷಯಗಳನ್ನು ಮಾತನಾಡಿಕೊಂಡಿದ್ದಾರೆ. ಇದೇ ವೇಳೆ ಶ್ರೀರಾಮುಲು ಅವರನ್ನು ಅಣ್ಣ ಎಂದು ಕರೆಯುವ ಮೂಲಕ ಡಿಕೆ ಶಿವಕುಮಾರ್ ಅವರು ಕೈಮುಗಿದು ಮಾತನಾಡಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಶ್ರೀರಾಮುಲು ಅವರು, ಟ್ರಬಲ್ ಶೂಟರ್ ಎಂದು ಕರೆದು ಮುಗಳ್ನಕ್ಕರು. ಆ ಮೂಲಕ ಇಬ್ಬರು ಮಾತಿನಲ್ಲೇ ತಮ್ಮ ತಮ್ಮ ಕಾಲೆಳೆದುಕೊಂಡು ಕೆಲವು ನಿಮಿಷಗಳು ಜೊತೆಯಲ್ಲಿ ಮಾತನಾಡುತ್ತಾ ಕಳೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here