ವಿಪ್ರೋ ಭಾರತದ ಪ್ರಮುಖ ಸಾಫ್ಟ್ ವೇರ್ ಕಂಪನಿ. ಇದರ ಮಾಲೀಕರು ಅಜೀಂ ಪ್ರೇಮ್ ಜಿ ಯವರು. ಚಿಕ್ಕವಯಸ್ಸಿನಲ್ಲೇ ಕಂಪನಿಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡ ಅವರು ತಮ್ಮ ಕಂಪನಿಯನ್ನು ವಿಶ್ವ ಮಾನ್ಯ ಮಟ್ಟಕ್ಕೆ ಬೆಳೆಸಿದ್ದು ಸಾಧನೆಯಾದರೆ, ಈಗ ಸಾಧನೆಗೆ ತನಗೆ ನೆರವು ನೀಡಿದ ಸಮಾಜಕ್ಕೆ ತನ್ನ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ ಅಜೀಂ ಪ್ರೇಮ್ ಜಿಯವರು. ಅವರು ತಾವು ಗಳಿಸಿದ ಸಂಪತ್ತನ್ನು ಈಗ ಸಮಾಜದ ಒಳಿತಿಗಾಗಿ ನೀಡಲು ಮುಂದಾಗುವ ಮೂಲಕ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಅವರು ತಮ್ಮ ಹೆಸರಿನಲ್ಲಿ ಷೇರ್ ಮಾರಾಟದಿಂದ ಬರುವ ಹಣವನ್ನು ಸಮಾಜ ಸೇವಾ ಕಾರ್ಯಗಳಿಗಾಗಿ ಬಳಸಲು ಸೂಚಿಸಿದ್ದಾರೆ.

ಅಜೀಂ ಪ್ರೇಮ್ ಜಿ ಅವರ ಹೆಸರಿನಲ್ಲಿರುವ ಸುಮಾರು 7300 ಕೋಟಿ ರೂಗಳ ಷೇರುಗಳನ್ನು ಮಾರಾಟ ಮಾಡುತ್ತಿದ್ದು, ಅವುಗಳ ಮಾರಾಟದಿಂದ ಬರುವು ಹಣವನ್ನು ಸಮಾಜ ಮುಖಿ ಕಾರ್ಯಗಳಿಗೆ ಬಳಸಿಕೊಳ್ಳಲು ತಿಳಿಸಿದ್ದಾರೆ. ಅಜೀಂ ಪ್ರೇಮ್ ಜಿ ಯವರ ಹೆಸರಿನ ಫೌಂಡೇಶನ್ ವಿಶ್ವದಲ್ಲೇ ಅತಿ ದೊಡ್ಡ ಖಾಸಗಿ ಸಾಮಾಜಿಕ ಸಂಸ್ಥೆಗಳ ಪೈಕಿ ಒಂದಾಗಿದ್ದು, ದೇಶದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಗಳ ಸಾಲಿನಲ್ಲಿರುವ ಕಂಪನಿಯೊಂದರ ಮಾಲೀಕರು ಅವರಾಗಿದ್ದಾರೆ. ಅವರು ಈ ರೀತಿ ಸಮಾಜ ಮುಖಿ ಕಾರ್ಯಗಳನ್ನು ಬಳಸುತ್ತಿರುವುದು ಇದೇ ಮೊದಲ ಸಲವಲ್ಲ. ಈ ಹಿಂದೆ ಕೂಡಾ ಅವರು ಇಂತಹ ಸಮಾಜ ಸೇವಾ ಕೆಲಸಗಳಿಗೆ ಆದ್ಯತೆ ನೀಡಿದ್ದಾರೆ.

ಈ ಹಿಂದೆ ಅವರ ಪಾಲಿನ 67% ಷೇರ್ ಗಳಿಂದ ಗಳಿಸಿದ್ದ ಲಾಭ ಸುಮಾರು 1.45 ಲಕ್ಷ ಕೋಟಿ ರೂ.ಗಳನ್ನು ಅವರು ತಮ್ಮ ಫೌಂಡೇಶನ್ ಗೆ ನೀಡಿದ್ದರು. ಈಗ ಮತ್ತೊಮ್ಮೆ ಅದೇ ರೀತಿಯಲ್ಲಿ ಮತ್ತೊಂದು ದೊಡ್ಡ ‌ಮೊತ್ತವನ್ನು ಸಮಾಜಕ್ಕಾಗಿ ಬಳಸಲು ಮುಂದಾಗಿದ್ದಾರೆ. ಅವರ ಫೌಂಡೇಶನ್ ವಿವಿಧ ರೀತಿಯಲ್ಲಿ, ಅಂದರೆ ಶಿಕ್ಷಣ , ಸಾಮಾಜಿಕ ಸೇವೆ, ಪೌಷ್ಟಿಕ ಆಹಾರ ಹೀಗೆ ಹಲವು ರೀತಿಯ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಅಜೀಂ ಪ್ರೇಮ್ ಜಿ ಅವರ ಸಮಾಜ ಮುಖಿ ಕಾರ್ಯಗಳು ಜನ ಮೆಚ್ಚುಗೆ ಪಡೆದಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here