ವಿಶ್ವದಾದ್ಯಂತ ಮಹಾಮಾರಿ ಕೊರೋನೋ ವ್ಯಾಪಿಸಿದ್ದು ಎಲ್ಲಾ ದೇಶಗಳೂ ಸಹ ಕೊರೋನಾ ಮಹಾಮಾರಿಗೆ ತತ್ತರಿಸಿ ಹೋಗಿವೆ. ಹಲವಾರು ದೇಶಗಳು ಕೊರೋನಾ ವೈರಸ್ನಿಂದ ಆರ್ಥಿಕ ಹಿಂಜರಿತ ಪರಿಸ್ಥಿತಿ ತಲುಪಿವೆ . ಕೊರೋನಾ ವೈರಸ್ ಆತಂಕ ಪಾಕಿಸ್ತಾನದಲ್ಲೂ ಸಹ ವ್ಯಾಪಿಸಿದೆ.. ಕೊರೋನಾ  ಮಹಾಮಾರಿಗೆ ಭಯ ಪಟ್ಟಿರುವ ಪಾಕಿಸ್ತಾನ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಲವಾರು ಕ್ರೀಡಾಕೂಟಗಳನ್ನು ರದ್ದುಗೊಳಿಸಲು ತೀರ್ಮಾನಿಸಿದೆ. ಪಾಕಿಸ್ತಾನದ ಕ್ರಿಕೆಟ್ ಪಂದ್ಯಗಳು ಇದೀಗ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಭಾರತದ ಐಪಿಎಲ್ ಮಾದರಿಯ ಪಿ ಎಸ್ ಎಲ್ ಕ್ರಿಕೆಟ್ ಟೂರ್ನಿಯನ್ನು ರದ್ದುಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

ಇನ್ನು ಮಹಾಮಾರಿ ಕೊರೋನೋ ವೈರಸ್ ಹರಡಲು ಮೂಲ ಕಾರಣವಾದ ಚೀನಾ ದೇಶದ ವಿರುದ್ಧ ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಪಟು ಶೋಹಿಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೀನಿಯರ ಆಹಾರ ಪದ್ಧತಿಯ ಬಗ್ಗೆ ಪ್ರಶ್ನಿಸಿರುವ ಶೋಯಬ್ ಅಖ್ತರ್ ಅವರು ನೀವು ಅದು ಹೇಗೆ ಬಾವಲಿಗಳನ್ನು, ನಾಯಿಗಳನ್ನು, ಬೆಕ್ಕುಗಳನ್ನು, ತಿನ್ನುತ್ತಿರೋ ಆ ದೇವರೇ ಬಲ್ಲ, ಬಾವಲಿ ನಾಯಿ ಬೆಕ್ಕುಗಳನ್ನು ತಿನ್ನುವುದಲ್ಲದೇ ಅವುಗಳ ದೇಹದ ರಕ್ತ ಮತ್ತು ಮೂತ್ರವನ್ನು ಸಹ ಕುಡಿಯುತ್ತಿರುವ ಚೀನಿಯರ ಆಹಾರ ಪದ್ಧತಿಯ ಬಗ್ಗೆ ಅವರಿಗೆ ಅರಿವೇ ಇಲ್ಲ ಎಂದು ನನಗೆ ಅನಿಸುತ್ತಿದೆ ಎಂದು ಚೀನಿಯರ ಆಹಾರ ಪದ್ಧತಿಯ ಬಗ್ಗೆ

ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಆಹಾರ ಪದ್ಧತಿಯಿಂದಾಗಿ ಇಂದು ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ ನಾನು ಚೀನಿಯರ ವಿರೋಧಿಯಲ್ಲ ಆದರೆ ಚೀನಿಯರ ಆಹಾರ ಪದ್ಧತಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪಾಕಿಸ್ತಾನದ ಮಾಜಿ ಬೌಲರ್ ಶೋಯಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಹಾರ ಪದ್ಧತಿ ಚೀನಿಯರ ಸಂಸ್ಕೃತಿ ಆಗಿರಬಹುದು ಆದರೆ ಆ ಸಂಸ್ಕೃತಿ ಇಂದು ಮಾನವೀಯತೆಯನ್ನೇ ಕೊಲ್ಲುತಿದೆ ದಯವಿಟ್ಟು ನಿಮ್ಮ ಪದ್ಧತಿಯನ್ನು ಬದಲಾಯಿಸಿಕೊಳ್ಳಿ ಎಂದು ಶೋಯಿಬ್ ಅಖ್ತರ್ ಜನರಿಗೆ ಮನವಿ ಮಾಡಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here