ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ಎಂದು ಅಣ್ಣಾವ್ರು ಕನ್ನಡಾಭಿಮಾನಿವನ್ನು ಹಾಡುತ್ತಾ, ಹಾಡಿನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರೆ ಒಂದು ರೋಮಾಂಚನದ ಅನುಭವ. ಆ ಹಾಡಿಗೆ ಅರಿವಿಲ್ಲದಂತೆಯೇ ದೇಹ ಪುಳಕಿತಗೊಳ್ಳುತ್ತದೆ. ಪ್ರತಿ ಸಾಲಿನಲ್ಲಿಯೂ ಕನ್ನಡ ಡಿಂಡಿಮ ಬಾರಿಸಿದ ಸದ್ದು ಕೇಳುತ್ತದೆ. ಇಂತಹ ಒಂದು ಸದಾ ಹಸಿರಾಗಿರುವ ಹಾಡಿನ ಚಿತ್ರೀಕರಣದ ಹಿಂದಿನ ರೋಚಕ ಅನುಭವವನ್ನು ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಹಂಚಿಕೊಂಡಾಗ ವೀಕ್ಷಕರಿಗೆ ಒಂದು ಹೊಸ ಅನುಭವ , ಅನುಭೂತಿಯಾಗಿದ್ದು ಸುಳ್ಳಲ್ಲ. ಆಕಸ್ಮಿಕ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತವರು ನಾಗಾಭರಣ.

ಸಿನಿಮಾದಲ್ಲಿ ಹೈಲೈಟ್ ಈ ಹಾಡು. ಅದನ್ನು ಅವರು ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ಚಿತ್ರೀಕರಣ ಮಾಡಬೇಕೆಂದು ಆಸೆ ಪಟ್ಟರು. ಆದರೆ ಅಣ್ಣಾವ್ರು ಇರುವ ಹಾಡನ್ನು ಅಲ್ಲಿ ಅಭಿಮಾನಿಗಳ ಮಧ್ಯೆ ಚಿತ್ರೀಕರಣ ಮಾಡೋದು ಅಸಾಧ್ಯ ಎಂದು ಪಾರ್ವತಮ್ಮ ರಾಜ್‌ಕುಮಾರ್ ಅವರು ಇಲ್ಲೇ ಬೆಂಗಳೂರಿನ ಸದಾಶಿವ ನಗರದಲ್ಲಿ ಮಾಡಿ ಅಂದ್ರಂತೆ. ಅಷ್ಟೆ ಸಿನಿಮಾ ಮುಗಿದು, ಡಬ್ಬಿಂಗ್ ಮುಗಿಸಿ ಆದರೂ ಇದೊಂದು ಹಾಡು ಬಾಕಿ ಇತ್ತು. ಆಗ ಒಂದು ದಿನ ವಾಕ್ ಹೋದಾಗ ನಾಗಾಭರಣ ಅವರು ಅಣ್ಣಾವ್ರಿಗೆ ಅಲ್ಲಿನ ಜನ ಕೂಡಾ ನಮ್ಮವರು, ಅವರನ್ನು ಸಮೀಕರಿಸಿ ಚಿತ್ರೀಕರಣ ಮಾಡಿದರೆ ಚೆಂದ ಅಂತ ಈ ವಿಚಾರ ಹೇಳಿದಾಗ ಅವರು ಮಾಡಿ, ನಾನು ಹೇಳ್ತೀನಿ ಅಂದ್ರಂತೆ. ಅವರು ಮಾಡಿ ಅಂದ್ರು ಆದರೆ ಸುಲಭದ ಕೆಲಸ ಆಗಿರಲಿಲ್ಲ. ಏಕೆಂದರೆ ಅಣ್ಣಾವ್ರ ಅಭಿಮಾನಿಗಳನ್ನು ತಡೆಯೋರು ಯಾರು?

 

ಅದಾದ ಎರಡು ದಿನದ ನಂತರ ಪಾರ್ವತಮ್ಮ ಅವರು ನಾಗಭರಣ ಅವರಿಗೆ ಹುಬ್ಬಳ್ಳಿಯಲ್ಲಿ ಶೂಟಿಂಗ್ ಮಾಡೋಕೆ ಹೇಳಿದ್ರಂತೆ. ಆಗ ಸುಮಾರು 890 ಕ್ಕಿಂತ ಅಧಿಕ ಪೋಲಿಸ್ ಬೆಟಾಲಿಯನ್ ಜೊತೆಗೆ , ಅವರ ಸಹಕಾರದಿಂದ ಈ ಅದ್ಭುತ ಹಾಡನ್ನು ಚಿತ್ರೀಕರಣ ಮಾಡಲಾಯಿತು ಎಂದು ಹೇಳಿದ ನಾಗಾಭರಣ ಅವರು, ಆ ದಿನ ಎಲ್ಲಾ ಪೋಲಿಸರು ನಾಗಭರಣ ಅವರ ಮನವಿ ಮೇರೆಗೆ ಯೂನಿಫಾರಂ ಧರಿಸದೆ ಸಾಮಾನ್ಯರಂತೆ ಬಣ್ಣದ ವಸ್ತ್ರ ಧರಿಸಿ ಶೂಟಿಂಗ್ ಗೆ ಸಹಕರಿಸಿದರಂತೆ. ಅಲ್ಲದೆ ಲಕ್ಷಾಂತರ ಜನ ಎಲ್ಲೆಲ್ಲೂ ತುಂಬಿ, ಬಿಲ್ಡಿಂಗ್ ಗಳ ಮೇಲೆ ಎಲ್ಲಾ ಕಡೆ ನೆರೆದು ಚಿತ್ರೀಕರಣ ನೋಡ್ತಾ ಇದ್ದ ಆ ಅನುಭವ ನಿಜಕ್ಕೂ ಅದ್ಭುತ ಅಂತಾರೆ ನಾಗಭರಣ ಅವರು.

Credit :- zee kannnada

"ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು". ಆಕಸ್ಮಿಕ ಚಿತ್ರದ ಈ ಹಾಡಿನ ಸೃಷ್ಟಿ ಹಾಗೂ ಅದರ ಹಿಂದಿನ ಶ್ರಮತೆಯ ಬಗ್ಗೆ ವಿವರಿಸಿದ ನಿರ್ದೇಶಕ Nagabharana.T.S. #ZeeKannada #WeekendWithRamesh4 #DrRajkumar #Akasmikaನಾಳೆ ರಾತ್ರಿ 9.30ಕ್ಕೆ.

Zee Kannada यांनी वर पोस्ट केले शनिवार, ८ जून, २०१९

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here