ಬೆಂಗಳೂರು ಮಾತ್ರವಲ್ಲದೇ ದೇಶದ ವಿವಿಧೆಡೆಗಳಲ್ಲಿ ಕೊರೊನಾ ವಿರುಧ್ಧ ಸಮರ ಸಾರಿರುವ ಹೆಲ್ತ್ ವಾರಿಯರ್ಸ್ ಅಥವಾ ಆರೋಗ್ಯ ಸಿಬ್ಬಂದಿಯ ಮೇಲೆ ನಡೆಸಲಾಗುತ್ತಿರುವ ಧಾಳಿಗಳ ವಿರುದ್ಧ ಧ್ವನಿ ಎತ್ತಿದೆ ಆಲ್ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್. ಎಐಎಂ ಈ ಧಾಳಿಗಳ ವಿರುದ್ಧ ತೀವ್ರವಾದ ಅಸಮಾಧಾನವನ್ನು ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೇ, ಇಂತಹ ಕೃತ್ಯಗಳನ್ನು ಕೂಡಲೇ ‌ನಿಲ್ಲಿಸಲು ಕೇಂದ್ರ ಸರ್ಕಾರವು ಕಠಿಣವಾದ ಕ್ರಮಗಳನ್ನು ಹಾಗೂ ಕಾನೂನನ್ನು ಜಾರಿಗೊಳಿಸಬೇಕು ಎಂದು ಆಗ್ರಹವನ್ನು ಕೂಡಾ ಮಾಡಿದೆ.

 

ಈಗ ನಡೆದಿರುವ ಹಲ್ಲೆಗಳು, ಧಾಳಿಗಳನ್ನು ಪ್ರತಿಭಟಿಸುತ್ತಾ, ಏಪ್ರಿಲ್‌ 22 ರ ರಾತ್ರಿ ಒಂಬತ್ತು ಗಂಟೆಗೆ ಎಲ್ಲಾ ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಮೋಂಬತ್ತಿಯನ್ನು ಹೊತ್ತಿಸಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಲಾಗಿದೆ. ಅಲ್ಲದೆ ಸರ್ಕಾರವು ಧಾಳಿಕೋರರ ವಿರುದ್ಧ ಕಠಿಣ ಕೇಂದ್ರೀಯ ಕಾನೂನಿನ ಅನ್ವಯ ಕ್ರಮಗಳನ್ನು ಜರುಗಿಸದೇ ಇದ್ದಲ್ಲಿ ಏಪ್ರಿಲ್ 23 ರಂದು ಕಪ್ಪು ದಿನ ಎಂದು ಘೋಷಣೆ ಮಾಡಿ, ಅಂದು ವೈದ್ಯರೆಲ್ಲರೂ ಕಪ್ಪು ಬಟ್ಟೆ ಧರಿಸಿ ಕರ್ತವ್ಯಕ್ಕೆ ಹಾಜರಾಗುವುದಾಗಿ ಎಎಂಐ ತಿಳಿಸಿದೆ.

 

ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕೆಂದು ಎಎಂಐ ಒತ್ತಾಯಿಸಿದೆ. ಇದು ಅನಿವಾರ್ಯ ಕೂಡಾ ಆಗಿದೆ.‌ ಏಕೆಂದರೆ ದೇಶವನ್ನು ಕೊರೊನಾ ಮುಕ್ತವನ್ನಾಗಿಸಲು ಹಗಲಿರುಳು ದುಡಿಯುತ್ತಿರುವ, ಜನರ ಪ್ರಾಣ ರಕ್ಷಣೆಗೆ ನಿಂತಿರುವವರ ಮೇಲೆ ಧಾಳಿ ನಡೆಸುವ ಮಂದಿ ನಿಜವಾದ ಸಮಾಜ ಘಾತುಕರು.‌ ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸುವುದು ಅಗತ್ಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here