ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ನಡೆದ ಅನೇಕ ಬೆಳವಣಿಗೆಗಳು ಆಗಿವೆ‌. ಅದರ ಭಾಗವಾಗಿಯೇ ಪೊಲೀಸ್‌ ಇಲಾಖೆಯಲ್ಲಿ ವರ್ಗಾವಣೆಗಳು ನಡೆದಿದ್ದು, ನಿನ್ನೆ ಅಂದರೆ ಶುಕ್ರವಾರ ಒಂದು ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ನೇಮಕಗೊಂಡಿದ್ದ ಅಲೋಕ್‌ ಕುಮಾರ್‌ ಸೇರಿದಂತೆ ಒಂಭತ್ತು ಜನ ಐಪಿಎಸ್‌ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ, ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎನ್ನಲಾಗಿದೆ.

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಅಲ್ಪಾವಧಿಯಲ್ಲೇ ತನ್ನನ್ನು ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿದ ಆದೇಶದಿಂದ ಅಸಮಾಧಾನಗೊಂಡಿದ್ದು, ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅದೇ ಕಾರಣದಿಂದಾಗಿಯೇ ನಿನ್ನೆ ನೂತನ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸುವ ವೇಳೆ ಅಲೋಕ್ ಕುಮಾರ್ ಅವರು ಗೈರು ಹಾಜರಾಗಿದ್ದರೆಂಬ ಮಾತುಗಳು ಕೇಳಿ ಬಂದಿವೆ‌. ಐಜಿಪಿ ಹುದ್ದೆಯಲ್ಲಿದ್ದ ಅಲೋಕ್‌ ಕುಮಾರ್‌ ಅವರಿಗೆ ಎಡಿಜಿಪಿ ಹುದ್ದೆಗೆ ಮುಂಬಡ್ತಿ ನೀಡಿ ಆಯುಕ್ತರನ್ನಾಗಿ ಜೂ.17ರಂದು ಸರ್ಕಾರ ನೇಮಕ ಮಾಡಿತ್ತು.

ಅವರಿಗೆ ಬಡ್ತಿ ನೀಡಿದಾಗ, ಸೇವಾ ಹಿರಿತನವನ್ನು ಪರಿಗಣನೆ ಮಾಡದೆ, ಕಿರಿಯ ಅಧಿಕಾರಿಗೆ ಸರ್ಕಾರವು ಮಣೆ ಹಾಕಿದೆ ಹಾಗೂ ಅವರಿಗೆ ಬಡ್ತಿ ನೀಡಿದೆಯೆಂದು ಕೆಲ ಹಿರಿಯ ಎಡಿಜಿಪಿಗಳು ತಮ್ಮ ಅಸಮಾಧಾನ ಹೊರಹಾಕಿದ್ದರು. ಆ ಎಲ್ಲಾ ಅಸಮಾಧಾನಗಳಿಗೆ ಈಗ ಉತ್ತರ ಸಿಕ್ಕಿದೆ ಎಂಬುದು ಈಗ ಕೆಲವರ ಅಭಿಪ್ರಾಯವಾದರೂ, ಅಲೋಕ್ ಕುಮಾರ್ ಅವರಿಗೆ ಈ ದಿಢೀರ್ ಬೆಳವಣಿಗೆಯು ಅಸಮಾಧಾನ ಉಂಟು ಮಾಡಿದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here