ಅಮರ್‌ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಮಾತನಾಡುತ್ತಾ ಮೇ 31 ರಂದು ಸಿನಿಮಾ ರಿಲೀಸ್ ಆಗುತ್ತಿರುವ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ನನಗೆ ಸಾವಿರಾರು ವೀಕ್‌ನೆಸ್‌ ಇದೆ. ಅದರಲ್ಲಿ ಒಂದು ವಾಕಿಂಗ್ ಸ್ಟೈಲ್ ಎಂದಿದ್ದಾರೆ. ಆದರೆ ಅದೆಲ್ಲವನ್ನು ನಮ್ಮ ನಿರ್ದೇಶಕರು ಬದಲಿಸಿದ್ದಾರೆ ಎಂದಿದ್ದಾರೆ. ಅಲ್ಲದೆ ಅವರು ಒಂದು ಆಸಕ್ತಿಕರವಾದ ವಿಷಯವನ್ನು ಕೂಡಾ ಹೇಳಿದ್ದಾರೆ. ಅದೇನೆಂದರೆ ಅವರ ತಂದೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೇಲಿನ ಪ್ರೀತಿಯಿಂದ ದಿಗ್ಗಜರಾದ ರಜಿನಿಕಾಂತ್, ಮೋಹನ್ ಬಾಬು, ಶತ್ರುಘ್ನ ಸಿನ್ಹಾ ಅವರು ಕೂಡಾ ಈ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದರೆಂಬ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.
ರಜಿನಿಕಾಂತ್ ಈ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಬೇಕಾದರೂ ಮಾಡ್ತೀನಿ ಎಂದು ಹೇಳಿದ್ದರಂತೆ.

ಅಂಬರೀಶ್ ಅವರು ಫಸ್ಟ್ ಹಾಫ್ ನೋಡಿ ಬದುಕೋತಿಯಾ ಬಿಡ್ಲಾ ಎಂದು ಹೇಳಿದ್ದರು ಎಂದಿದ್ದಾರೆ. ಅಭಿಷೇಕ್ ಅವರು ಆತ್ಮವಿಶ್ವಾಸ ಕಡಿಮೆಯಾಗುತ್ತದೆ ಎಂದು ಅಂಬರೀಶ್ ಅವರು ಯಾವಾಗಲೂ ಟೀಕೆ ಮಾಡುತ್ತಿರಲಿಲ್ಲ, ಬದಲಾಗಿ ಅಮ್ಮ ಎಲ್ಲವನ್ನೂ ಹೇಳುತ್ತಿದ್ದರು ಎಂದು ತಂದೆ ತಾಯಿ ನೀಡಿದ ಮಾರ್ಗದರ್ಶನದ ಬಗ್ಗೆ ಕೂಡಾ ಅವರು ಹೇಳಿದ್ದಾರೆ. ಮೊದಲ ಚಿತ್ರವಾದ್ದರಿಂದ ಮೊದಲ ದಿನದ ಶೂಟಿಂಗ್ ಕಷ್ಟ ಎನಿಸಿತ್ತು. ಅದಕ್ಕಾಗಿ ಎಷ್ಟೇ ತಯಾರಿ ನಡೆಸಿದ್ರು ಕೂಡಾ ಮೊದಲ ಬಾರಿ ಕ್ಯಾಮೆರಾ‌ ಮುಂದೆ ನರ್ವಸ್ ಆಗಿತ್ತು ಆದರೆ ಸೆಕೆಂಡ್ ಟೈಂ ಭಯ ಆಗಿದ್ದು, ದರ್ಶನ್ ಬಂದ್ರೆ ಎನ್ನುವ ಭಯ ಅಂತಾ ಹೇಳಿದ ಅಭಿಷೇಕ್ ಅವರು, ದರ್ಶನ್ ಅವರು ಅಪ್ಪಾಜಿ ಜತೆಗೆ ನಟಿಸಿದ ಸಿನಿಮಾನಾ ನೆನಪಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಷ್‌ ಅವರು ಮಾತನಾಡುತ್ತಾ ಧರ್ಮಸ್ಥಳದಲ್ಲಿ ಉಂಟಾಗಿರುವ ನೀರಿನ ಅಭಾವದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಂದ ನಂತರ ಪರಿಹಾರ ಹುಡುಕುವುದಲ್ಲ ಬದಲಾಗಿ ಮೊದಲೇ ಪರಿಸರವನ್ನು ರಕ್ಷಿಸಬೇಕು ಎಂದಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಬೇಕಾದ ಅವಶ್ಯಕತೆ ಇದ್ದು ಸರ್ಕಾರ ಮೊದಲು ಇದಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರ, ಪ್ರಜೆಗಳು ಒಂದಾಗಿ ಈ ಕೆಲಸ ಮಾಡಬೇಕೆಂದಿದ್ದಾರೆ.

ನಿರ್ದೇಶಕ ನಾಗಶೇಖರ್ ಅವರು ಮಾತನಾಡುತ್ತಾ ಚಿತ್ರಕ್ಕೆ ಸುಮಲತಾ ಅವರು ಬಹಳ ಸಹಕಾರ ನೀಡಿದರೆಂದು, ಕಥೆಯಲ್ಲಿ ಯಾವುದೇ ಬದಲಾವಣೆಯನ್ನು ಅವರು ಮಾಡಲಿಲ್ಲ ಎಂದು ತಮ್ಮ ಅನುಭವ ಹೇಳಿದ್ದಾರೆ. ಚಿತ್ರದ ಆರಂಭದಲ್ಲೇ ಅಂಬಿಯ ಡೈಲಾಗ್ ಎಲ್ಲರನ್ನೂ ರಂಜಿಸಲಿದೆ ಎಂದು ಕೂಡಾ ಅವರು ಹೇಳಿದ್ದಾರೆ. ಇದೇ ಮೇ 31ರಂದು ಅಮರ್ ಸಿನಿಮಾ ರಿಲೀಸ್ ಆಗಲಿದೆ. 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here