ರಿಲೆಯನ್ಸ್ ‌ನ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಹಾಗೂ ನೀತೂ ಅಂಬಾನಿ ಅವರ ಪುತ್ರ ಆಕಾಶ್ ಅಂಬಾನಿಯವರ ಮದುವೆ ಇತ್ತೀಚಿಗಷ್ಟೆ ಇಡೀ ದೇಶವೇ ನೋಡುವಷ್ಟು ಅದ್ದೂರಿಯಾಗಿ ನಡೆದದ್ದು ಮಾದ್ಯಮಗಳ ಮುಖೇನ ಪ್ರತಿಯೊಬ್ಬರಿಗೂ ತಿಳಿದ ವಿಷಯವಾಗಿದೆ. ದೇಶದ ಪ್ರಮುಖ ಗಣ್ಯರು ಹಾಗೂ ಬಾಲಿವುಡ್ ನ ಸೆಲೆಬ್ರೆಟಿಗಳ ದಂಡೇ ಅಲ್ಲಿ ಸೇರಿತ್ತು. ಬಹಳ ವೈಭವದಿಂದ , ಒಂದು ಅದ್ದೂರಿ ಮದುವೆ ಮಾದ್ಯಮಗಳಲ್ಲಿ ದೊಡ್ಡ ಸದ್ದು ಮಾಡಿ, ನೋಡುಗರ ಕಣ್ಣು ಕೋರೈಸಿತ್ತು. ಇನ್ನು ಈ ಮದುವೆಯಲ್ಲಿ ಅನೇಕ ವಿಶೇಷತೆಗಳು, ಕಣ್ಣಿಗೆ ತಂಪು ನೀಡುವ, ಮನಸ್ಸಿಗೆ ಆಹ್ಲಾದಕರ ಎನಿಸುವಂತಹ ಆಕರ್ಷಣೆಗಳು ಕೂಡಾ ಅಲ್ಲಿದ್ದವು.

 

ಇದರಲ್ಲಿ ಮುಖ್ಯವಾಗಿ ಹೂವಿನ ಅಲಂಕಾರ ವಿಶೇಷವಾಗಿತ್ತು ಹಾಗೂ ನೋಡುಗನ ಚಿತ್ತವನ್ನು ತನ್ನತ್ತ ಸೆಳೆಯುತ್ತಿತ್ತು. ಈಗ ಆ ಹೂವಿನಿಂದ ಅರಳಿದ್ದ ಕಲಾಕೃತಿಗಳು ಹಾಗೂ ಅಲಂಕಾರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅದನ್ನು ಅಲಂಕರಿಸಿದ ಕಲಾಕಾರನ ಕಲೆಯನ್ನು ಎಲ್ಲರೂ ಮೆಚ್ಚುವಂತಿದೆ. ಸುಂದರವಾದ ಹೂಗಳಲ್ಲಿ ವೈವಿದ್ಯಮಯವಾದ ಅಲಂಕಾರವನ್ನು ಮಾಡಲಾಗಿತ್ತು ಹಾಗೂ ವಿವಿಧ ಬಣ್ಣಗಳು ಪುಷ್ಪಗಳು ರಂಗಿನ ಹಬ್ಬವನ್ನು ಅಲ್ಲಿ ಮೂಡಿಸಿದ್ದವು.

ಹೂವಿನಿಂದ ಸಿಂಗರಿಸಲ್ಪಟ್ಟ ಶ್ರೀ ಕೃಷ್ಣನ ಮೂರ್ತಿಯು ಹೂವಿನಿಂದ ಅರಳಿದ್ದ ಅಪರೂಪದ ಕಲಾಕೃತಿಯಂತೆ ಕಂಡಿತ್ತು. ಅದರ ಜೊತೆಗೆ ಗಜರಾಜ, ನವಿಲು, ಕುದುರೆ ಹೀಗೆ ವಿವಿಧ ಹೂವಿನ ಕಲಾಕೃತಿಗಳು ವೈವಿದ್ಯಮಯವಾಗಿ ಅಲ್ಲಿ ಅರಳಿ ನಿಂತು ವಿವಾಹಕ್ಕೆ ಬಂದವರಿಗೆ ಸ್ವಾಗತ ಕೋರುತ್ತಿದ್ದವು. ಹೂವು ಕಣ್ಣಿಗೆ ತಂಪನ್ನು ನೀಡುತ್ತವೆ. ಅಂತಹುದರಲ್ಲಿ ಹೂವಿನಿಂದ ಅರಳಿದ ಕಲಾಕೃತಿಗಳು ಹೇಗೆ ತಾನೇ ಮನಸ್ಸನ್ನು ರಂಜಿಸದೆ ಇರಲಾರವು. ಆ ಕಲಾಕೃತಿಗಳು ರಚನೆ ಮಾಡಿದ ಕಲಾಕಾರನ ಕಲಾ ನೈಪುಣ್ಯ ನಿಜಕ್ಕೂ ಶ್ಲಾಘನೀಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here