ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊದಲನೇ ವರ್ಷದ ಪುಣ್ಯ ತಿಥಿಯ ಕಾರ್ಯವನ್ನು ಇಂದು ಸುಮಲತ ಅಂಬರೀಶ್ ಹಾಗೂ ಅಭಿಷೇಕ್ ಅವರು ನೆರವೇರಿಸಿದ್ದಾರೆ. ವರ್ಷ ತುಂಬುವ ಮೊದಲೇ ತಿಥಿ ಮಾಡಬೇಕಾಗಿದ್ದರಿಂದ , ಅಂಬರೀಶ್ ಅವರ ನಕ್ಷತ್ರದ ಅನ್ವಯ ಹತ್ತು ದಿನ ಮೊದಲೇ ಈ ಕಾರ್ಯವನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ಸುಮಲತ ಹಾಗೂ ಅಭಿಷೇಕ್ ಅವರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಹಾಗೂ ಹಿರಿಯ ನಟ ದೊಡ್ಡಣ್ಣ ಅವರು ಉಪಸ್ಥಿತರಿದ್ದು ಪೂಜೆಯನ್ನು ಸಲ್ಲಿಸಿದರು.

ಅಂಬರೀಶ್ ಅವರ ಪುಣ್ಯ ತಿಥಿಯ ಅಂಗವಾಗಿ ಅಂಬರೀಶ್ ಅವರ ಸಮಾಧಿ ಮುಂದೆ ಏರ್ಪಡಿಸಲಾಗಿದ್ದ ಡೆಂಟಲ್ ಕ್ಯಾಂಪ್ ಅನ್ನು ಸುಮಲತ ಅವರು ಮತ್ತು ದರ್ಶನ್ ಅವರು ಉದ್ಘಾಟನೆ ಮಾಡಿದರು. ಇದಲ್ಲದೆ ಅರಮನೆ ಮೈದಾನದಲ್ಲಿ ರೆಬೆಲ್ ಸ್ಟಾರ್ ಅವರ ಅಭಿಮಾನಿಗಳಿಗೆ ಭೋಜನದ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಂಬರೀಶ್ ಅವರ ಸ್ಮಾರಕದ ಬಗ್ಗೆ ಕೂಡಾ ಸುಮಲತ ಅವರು ಮಾತನಾಡುತ್ತಾ ರಾಜ್ಯ ಸರ್ಕಾರ ಬದಲಾದ ಕಾರಣ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.

ಫಿಲ್ಮ್ ಚೇಂಬರ್ ಮೂಲಕ ಈಗಿನ ರಾಜ್ಯ ಸರ್ಕಾರಕ್ಕೆ ಸ್ಮಾರಣ ನಿರ್ಮಾಣದ ಕುರಿತು ಮನವಿ ಮಾಡಲಾಗುವುದು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಮಾತನಾಡುತ್ತಾ ಈಗಾಗಲೇ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಕ್ಕೆ ಸಮ್ಮತಿ ಸೂಚಿಸಿದ್ದಾರೆ. ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಕೂಡಾ ಸಮ್ಮತಿ ದೊರೆತಿದ್ದು, ಈಗೊಂದು ಟ್ರಸ್ಟ್ ಆಗಬೇಕಿದ್ದು, ಮುಖ್ಯ ಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದ್ದಾರೆ. ಅನಂತರ ಟ್ರಸ್ಟ್ ನಲ್ಲಿ ಎಲ್ಲಾ ವಿಷಯ ಚರ್ಚೆ ನಡೆದು ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here