ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಜಯಂತೋತ್ಸವದ ಸಂದರ್ಧದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ. ಅಂಬರೀಶ್ ಅವರ ಮನೆ ಮಗನಂತೆ, ಸದಾ ಅವರ ಆಪ್ತನಾಗಿದ್ದ ದರ್ಶನ್ ಅವರ ಪ್ರೀತಿ ಅಂಬಿ ಹಾಗೂ ಅವರ ಕುಟುಂಬದ ಪರವಾಗಿ ಎಂತದ್ದು ಎಂಬುದನ್ನು ಕರ್ನಾಟಕದ ಜನ ಈಗಾಗಲೇ ತಿಳಿದಿದ್ದಾರೆ. ತಮ್ಮ ನೆಚ್ಚಿನ ಅಂಬರೀಶ್ ಕುರಿತಾಗಿ ದರ್ಶನ್ ಅವರು, ಅಪ್ಪಾಜಿಯವರ ಪ್ರೀತಿ, ಆದರ್ಶ, ಕುಟುಂಬ ಮತ್ತು ಅಭಿಮಾನಿಗಳನ್ನು ಯಾವಾಗಲೂ ಕಾಯ್ತಾ ಇರುತ್ತೆ ಎಂದು ಪೋಸ್ಟ್ ಮಾಡುವ ಮೂಲಕ ತಮ್ಮ ಮಾತುಗಳನ್ನು ಹಾಗೂ ಭಾವನೆಗಳನ್ನು ಎಲ್ಲರೊಂದಿಗೆ ಅವರು ಹಂಚಿಕೊಂಡಿದ್ದಾರೆ.

ದರ್ಶನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ಅವರು ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ ಎಂದು ಬರೆದುಕೊಳ್ಳುವ ಮೂಲಕ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಾ ಅಂಬರೀಶ್ ಅವರ ಜನ್ಮ ದಿನದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್ ಅವರು ತಮ್ಮ ಟ್ವೀಟ್ ಜೊತೆಯಲ್ಲಿ ಕಾರಿನಲ್ಲಿ ತಾವು ಅಂಬರೀಶ್ ಅವರ ಜೊತೆಗಿರುವ ಫೋಟೋ ಒಂದನ್ನು ಹಾಕಿದ್ದಾರೆ. ಇಂದು ಅಂಬರೀಶ್ ಅವರ 67ನೇ ಹುಟ್ಟುಹಬ್ಬವಾಗಿದ್ದು, ದರ್ಶನ್ ಅವರು ಫೋಟೋ ಹಾಕಿ ಟ್ವೀಟ್ ಮಾಡಿ ಅಂಬರೀಶ್ ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಸಾವಿರಾರ ಜನ ಟ್ವೀಟ್ ಮಾಡುತ್ತಾ, ಅಂಬರೀಶ್ ಅವರ ಫೋಟೋಗಳನ್ನು ಹಾಕಿ ಅವರ ಜನುಮ ದಿನವನ್ನು ಸಂಭ್ರಮಿಸಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here