ಸುಮಲತಾ ಅಂಬರೀಶ್ ಮತ್ತು ಸಿ.ಎಸ್. ಪುಟ್ಟರಾಜು ನಡುವಿನ ಟಾಕಿಂಗ್ ವಾರ್ ಮುಂದುವರಿದಿದೆ. ನಮ್ಮ ಮನೆ ಮೇಲಿನ ಐಟಿ ದಾಳಿಗೆ ಸುಮಲತಾ ಅಂಬರೀಶ್ ಕಾರಣ ಎಂದಿದ್ದ ಪುಟ್ಟರಾಜು ಹೇಳಿಕೆಗೆ ತಿರುಗೇಟು ಕೊಟ್ಟಿದ್ದ ಸುಮಲತಾ ಅಂಬರೀಶ್ ಅವರು ಪುಟ್ಟರಾಜು ಅವರಿಗೆ ಆತ್ಮಾಭಿಮಾನ ಇದ್ದರೆ ಅಂಬರೀಶ್ ಅವರ ಬಗ್ಗೆ ಒಂದು ನಿಮಿಷ ಕಣ್ಣು ಮುಚ್ಚಿ ಯೋಚಿಸಲಿ ಎಂದು ಟಾಂಗ್ ಕೊಟ್ಟಿದ್ದರು. ಇದೀಗ ಸುಮಲತಾ ಅಂಬರೀಶ್ ಅವರ ಈ ಹೇಳಿಕೆಗೆ ಪುಟ್ಟರಾಜು ಅವರು ಫುಲ್ ಗರಂ ಆಗಿದ್ದಾರೆ. ಸುಮಲತಾ ಅಂಬರೀಶ್ ಅವರು ಮುಂದಿನ ಬಾರಿ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಲು ಹೋದಾಗ ಆ ಜಾಗದಲ್ಲಿ ನಿಂತು ಅಂಬಿ ಮತ್ತು ನನ್ನ ನಡುವಿನ

ಸಂಬಂಧವನ್ನು ನೆನೆಸಿಕೊಳ್ಳಲಿ ನಾನು ಅಂಬಿಗಾಗಿ ಏನೆಲ್ಲಾ ಮಾಡಿದ್ದೇನೆ ಎಂಬುದು ಸುಮಲತಾ ತಿಳಿಯಲಿ. ರಾಮನಗರ ಚುನಾವಣೆಯಲ್ಲಿ ಅಂಬರೀಶ್ ಸೋತಾಗ ಅವರನ್ನು ನಾನು ನನ್ನ ಹಣದಲ್ಲಿ ಮಂಡ್ಯಕ್ಕೆ ಕರೆತಂದು ಅವರಿಗಾಗಿ ಶ್ರಮಿಸಿದವನು. ಅಂಬರೀಶ್ ಅವರನ್ನು ಕರೆದುಕೊಂಡು ಮಂಡ್ಯ ಜಿಲ್ಲೆಯನ್ನು ಸುತ್ತಿಸಿ ಮತ್ತೆ ಮಂಡ್ಯದಲ್ಲಿ ಅಂಬರೀಶ್ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಜವಬ್ದಾರಿ ಹೊತ್ತವನು ನಾನು. ನನ್ನ ಅಂಬರೀಶ್ ಅವರು ನಿಯತ್ತಿನ ಪುಟ್ಟರಾಜ ಎಂದೇ ಕರೆಯುತ್ತಿದ್ದವರು.

ಇಂದು ಸುಮಲತಾ ಅಕ್ಕನಿಗೆ ಆತ್ಮಾಭಿಮಾನ ಇದ್ದರೆ ಅಂಬಿ ಸಮಾಧಿ ಮುಂದೆ ನಿಂತು ಆತ್ಮಾವಲೋಕನ ಮಾಡಿಕೊಳ್ಳಲಿ .‌ಅಂಬರೀಷ್ ಅವರು ಎಸ್ ಎಂ ಕೃಷ್ಣ ನೇತೃತ್ವದ ಸರ್ಕಾರದಲ್ಲಿ ನನ್ನ ಮಂತ್ರಿ ಮಾಡಲು ಬಯಸಿದ್ದರು ಆದರೆ ನಾನು ದೇವೇಗೌಡರ ಪಕ್ಷ ಬಿಟ್ಟು ಹೋಗಲು ಸಿದ್ದರಿರಲಿಲ್ಲ ಆಗ ಅಂಬಿ ನನಗೆ ನಿಯತ್ತಿನ ಪುಟ್ಟರಾಜ ಎಂದು ಕರೆದಿದ್ದರು..

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here