ಕನ್ನಡ ಚಿತ್ರರಂಗದಲ್ಲಿ ಮಾಸ್ ಮತ್ತು‌ ಕ್ಲಾಸ್ ಎರಡೂ ವರ್ಗದ ಅಭಿಮಾನಿಗಳನ್ನು ಸಂಪಾದಿಸಿರುವ ನಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಸಹ ಪ್ರಮುಖರು.ಕನ್ನಡ ಸಿನಿ ಜಗತ್ತಿನಲ್ಲಿ ರೆಬಲ್​ ಸ್ಟಾರ್​ ಅಂಬರೀಶ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅವರ ಅಂತಿಮ ಯಾತ್ರೆಯಲ್ಲಿ ನೆರೆದಿದ್ದ ಜನ ಸಾಗರವೇ ಅದಕ್ಕೆ ಸಾಕ್ಷಿ. ಅಭಿಮಾನಿಗಳು ಅಂಬರೀಶ್​ ಅವರನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೈಸೂರಿನ ವ್ಯಕ್ತಿಯೋರ್ವ ಅಂಬಿ ಮೇಲಿನ ಅಭಿಮಾನಕ್ಕೋಸ್ಕರ ಅಂಗಾಗ ದಾನ ಮಾಡಲು ನೋಂದಣಿ ಮಾಡಿಸಿದ್ದಾರೆ.ಮೈಸೂರಿನ ಬಿದನಹಳ್ಳಿಯ ನಂದೀಶ್​ ಅಂಬರೀಶ್​ ಅಭಿಮಾನಿ. ಇವರು ಬನ್ನೂರಿನ ಅಂಬರೀಶ್ ಅಭಿಮಾನಿ ಬಳಗದ ಅಧ್ಯಕ್ಷರೂ ಹೌದು. ನಂದೀಶ್​ ತಾನು ಸತ್ತ ಬಳಿಕ ಅಂಗಾಂಗ ದಾನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಅಂಬಿಯ 11ನೇ ದಿನದ ಪುಣ್ಯತಿಥಿ ಕಾರ್ಯದ ವೇಳೆ ನಂದೀಶ್​ ತಮ್ಮ ನಿರ್ಧಾರ ತಿಳಿಸಿದ್ದಾರೆ. ಇದೇ ವೇಳೆ ಮೂವರು ಅಭಿಮಾನಿಗಳು ಕೇಶಮುಂಡನವನ್ನೂ ಸಹ ಮಾಡಿಸಿಕೊಂಡಿದ್ದಾರೆ. ನಂದೀಶ್​ ಮತ್ತು ಬಳಗದವರು ಅಂಬಿ ಭಾವಚಿತ್ರವನ್ನು ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿ, ಬಳಿಕ ಇಡೀ ಗ್ರಾಮಕ್ಕೆ ಅನ್ನದಾನ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.ಅಂಬರೀಶ್​ ಕುಟುಂಬಕ್ಕೆ ನಂದೀಶ್ ತುಂಬಾ ಆಪ್ತರು. ಪ್ರತಿ ವರ್ಷ ಅಂಬಿ ಹುಟ್ಟುಹಬ್ಬಕ್ಕೆ ಅವರ ಮನೆಗೆ ಹೋಗಿ ಸಿಹಿ ತಿನ್ನಿಸುತ್ತಿದ್ದರು.

ಅಷ್ಟೇ ಅಲ್ಲದೇ, ಅಭಿಮಾನಿಗಳಿಗೆ ಗಿಡಗಳನ್ನು ಕೊಟ್ಟು ಅಂಬಿ ಹುಟ್ಟುಹಬ್ಬ ಆಚರಿಸುತ್ತಿದ್ದರು. ಸುಮಲತಾ ಹಾಗೂ ಅಭಿಷೇಕ್​ ಎಂದರೂ ನಂದೀಶ್​ಗೆ ಅಚ್ಚುಮೆಚ್ಚು. ನಂದೀಶ್​ ಅಂಬಿ ಕುಟುಂಬದ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿದ್ದರು. ಇದೀಗ ಅಂಗಾಂಗ ದಾನ ಮಾಡಲು ನೋಂದಣಿ ಮಾಡುವುದಾಗಿ ತನ್ನ ಸ್ನೇಹಿತರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಅಂಗಾಂಗ ದಾನ ಮಾಡುವಂತೆ ಆಪ್ತರು ಹಾಗೂ ಗೆಳೆಯರ ಬಳಿ ಅವರು ಕೋರಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here