ಕನ್ನಡ ಚಿತ್ರರಂಗದಲ್ಲಿ ಈಗ ಅಂಬಿದೇ ಸದ್ದು. ಹಲವು ವರ್ಷಗಳ ನಂತರ ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ನಾಯಕನಟನಾಗಿ ಅಭಿನಯಿಸಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಬಿಡುಗಡೆ ಆಗಿದೆ.ತೆರೆಕಂಡ ನಂತರ ಉತ್ತಮವಾದ ಓಪನಿಂಗ್ ಜೊತೆ ಪ್ರೇಕ್ಷಕರರಿಂದ ಬ್ಯೂಟಿಫುಲ್ ರೆಸ್ಪಾನ್ಸ್ ಸಹ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ಪಡೆದುಕೊಂಡಿದೆ.ರೆಬೆಲ್ ಸ್ಟಾರ್ ಅಂಬರೀಶ್ ,ಕಿಚ್ಚ ಸುದೀಪ್ ,ಸುಹಾಸಿನಿ ,ಶೃತಿ ಹರಿಹರನ್  ,ಶಿವರಾಜ್ ಕೆ ಆರ್ ಪೇಟೆ ಮುಂತಾದವರು ನಟಿಸಿರುವ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ಫ್ಯಾಮಿಲಿ ಓರಿಯಂಟೆಡ್ ಸಬ್ಜೆಕ್ಟ್ ಆಗಿದ್ದು ತಂದೆ ಮಗನ ನಡುವಿನ ಚಿತ್ರಕತೆ ನೋಡುಗರ ಮನಗೆಲ್ಲುತ್ತದೆ.

ಪ್ರೇಕ್ಷಕರ ಮನಗೆದ್ದಿರುವುದು ಮಾತ್ರವಲ್ಲದೇ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ಕನ್ನಡ ಚಿತ್ರರಂಗದ ಸ್ಟಾರ್‌ನಟರನ್ನು ಸಹ ಚಿತ್ರಮಂದಿರದತ್ತ ಬರುವಂತೆ ಮಾಡಿದೆ.ಅಂಬಿ ಚಿತ್ರವನ್ನು ಕಳೆದ ವಾರ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ನಟನಟಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಇದೀಗ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ಭಾರತ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟರ್ ಎಲ್ ಕೆ ರಾಹುಲ್ ನೋಡಿ ಮೆಚ್ಚುಗೆ ಹಂಚಿಕೊಂಡಿದ್ದಾರೆ. ರಾಹುಲ್ ಜೊತೆ ನಿಖಿಲ್ ಗೌಡ ಮತ್ತು ಅಂಬರೀಶ್ ಪುತ್ರ ಅಭಿಷೇಕ್ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರವನ್ನು ಭಾನುವಾರ ಸಂಜೆ ವೀಕ್ಷಣೆ ಮಾಡಿದ್ದಾರೆ.ಇದೀಗ ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನೋಡಿ

ಮೆಚ್ಚಿಕೊಂಡರು. ಮಲ್ಲೇಶ್ವರಂ ನ ಮಂತ್ರಿಮಾಲ್ ನಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನೋಡಿದ ಡಾ.ಶಿವರಾಜಕುಮಾರ್ ಸಿನಿಮಾದಲ್ಲಿ ತಂದೆ ಮಗ ಹಾಗೂ ಪ್ರೀತ ಬಗ್ಗೆ ಸೊಗಸಾಗಿ ತೋರಿಸಲಾಗಿದೆ.ಅಂಬಿ ಮಾಮ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ.ಅಂಬರೀಶ್ ಜೊತೆ ಸುಹಾಸಿನಿ ಮತ್ತು ಜ್ಯೂನಿಯರ್ ಅಂಬಿ ಪಾತ್ರದಲ್ಲಿ ಸುದೀಪ್ ಅವರ ಅಭಿನಯದ ಬಗ್ಹೆ ಮೆಚ್ಚುಗೆಯ ಮಾತನಾಡಿದರು.ಸಿನಿಮಾ ನನಗೆ ತುಂಬಾ ಇಷ್ಡವಾಯಿತು.ದಯವಿಟ್ಟು ಎಲ್ಲರೂ ಅಂಬಿ‌ ನಿಂಗ್ ವಯಸ್ಸಾಯ್ತೋ ಸಿನಿಮಾವನ್ನು ನೋಡಿ ಎಂದು ಶಿವರಾಜಕುಮಾರ್ ಅವರು ತಿಳಿಸಿದರು.

Photo credit :- Facebook Fans Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here